Haridasa Sahitya — Vyasadasa
Taratamya Sulaadi 6 — Sadhana kalpa bimba darshana pramana jnanavyapti sulaadhi
ಸುಳಾದಿ ೬ — ಸಾಧನ ಕಲ್ಪ ಬಿಂಬದರ್ಶನ ಪ್ರಮಾಣ ಜ್ಞಾನವ್ಯಾಪ್ತಿ ಸುಳಾದಿ
Composer: Vijaya Dasaru · Deity: Vishnu / Vitthala · Genre: Sulaadi
Kannada lyrics
ಸಾಧನ ಕಲ್ಪ ಬಿಂಬದರ್ಶನ ಪ್ರಮಾಣ ಜ್ಞಾನವ್ಯಾಪ್ತಿ ಸುಳಾದಿ ರಾಗ ಶಂಕರಾಭರಣ ಧ್ರುವತಾಳ ಸ್ವರಮಣ ಸ್ವತಂತ್ರ ಸುಗುಣ ಸಾಕಾರ ಸುಂದರ ಪರಬೊಮ್ಮ ಸರ್ವಜ್ಞ ವ್ಯಾಪ್ತ ವ್ಯಕ್ತಾವ್ಯಕ್ತ ನಿರುಪಾಧಿಕ ಭಕ್ತಪಾಲ ನಿಸ್ಸಂಗ ಅಪ್ರಾಕೃತ ಶರೀರ ನಿರವಕಾಶ ಪ್ರಮೇಯಭರಿತ ಹರಿ ಸರ್ವೋತ್ತಮ ನಿತ್ಯ ನಿಖಿಲೈಶ್ವರ್ಯ ಭೂಮ ಸರ್ವದ ಲಿಂಗ ಸೂಕ್ಷ್ಮ ಸ್ಕೂಲ ದೇಹದ ತತ್ವದಲ್ಲಿ ಪೊರೆವಗೋಸುಗ ವಸತಿಯಿಪ್ಪ ಈಶಾ ಪರಿಪೂರ್ಣ ಪ್ರಭು ಪ್ರಣವ ಪ್ರತಿಪಾದ್ಯ ಇಂದಿರೆ- ಯರಸ ಪರತತ್ವ ನಾನಾರೂಪ ಸುಪ್ರತಾಪ ಎರಡೊಂದು ಯೋಗ್ಯರನ್ನು ನೋಡಿ ಮುಕ್ತಿ ಜೀವರ ತರತಮ್ಯ ಚತುರ್ದಶ ಬಗೆ ನೇಮಿಸಿ ಹಿರಿದಾಗಿ ಅಂಶಾನಂದ ಬಲಜ್ಞಾನ ದೇಶ ಕಾಲ ಮರಳೆ ಅಪರೋಕ್ಷಲಯ ಸೃಷ್ಟಿ ಪದ ತರುವಾಯ ಅವ…