Haridasa Sahitya — Vyasadasa
Taratamya Sulaadi 5 — Taratamya kalpasadhana sulaadhi
ಸುಳಾದಿ ೫ — ತಾರತಮ್ಯ ಕಲ್ಪಸಾಧನ ಸುಳಾದಿ
Composer: Vijaya Dasaru · Deity: Vishnu / Hari · Genre: Sulaadi
Kannada lyrics
ತಾರತಮ್ಯ ಕಲ್ಪಸಾಧನ ಸುಳಾದಿ ರಾಗ ಶ್ರೀರಂಜನಿ ಧ್ರುವತಾಳ ತೃಣ ಪ್ರಾರಂಭ ಮಾಡಿ ಪರಮೇಷ್ಠಿ ಪರಿಯಂತ ಎಣಿಸಿ ಗುಣಿಸುವುದು ತಾರತಮ್ಯದಿ ಗಣನೆ ಉಂಟು ಕೇಳೊ ಒಂದೊಂದು ಬೊಮ್ಮಾಂಡಕ್ಕೆ ಅನುಮಾನ ಮಾಡಸಲ್ಲಾ ಗುಣವಂತರು ಜನಿಸುವರು ಚರ್ಮ ಭಾವಿ ಯೋಗ್ಯತ ಸಾ- ಧನ ಜೀವಿಗಳು ಪ್ರವಹದಂತೆ ವನಜಸಂಭವನೊಬ್ಬ ಸಂಪೂರ್ಣ ಬಿಂಬ ದ ರ್ಶನ ಕಾಂಬ ಸರ್ವದಾ ಬಹುಪ್ರಕಾರ ಅನಿಲ ದೇವನು ಮುಖ್ಯ ಉಳಿದವರಿಗಿಂತ ಮನದಿಚ್ಛೆಯಲ್ಲಿ ಸ್ಪಷ್ಟತ್ವ ಭೇದ ದಿನದಿನದಲ್ಲಿ ಎನ್ನಿ ಮಿಕ್ಕಾದ ತೊಂಭತ್ತೆಂಟು ಜನರು ಲಾತವ್ಯರೆಂದು ಕರೆಸುವರು ಎಣಿಕೆ ಮಾಡಿ ಇಲ್ಲಿಗೆ ಶತ ಜನರನ್ನು ನಿತ್ಯ ಘನವಾಗಿ ಯೋಗ್ಯತಾ ಅಪರೋಕ್ಷವೋ ಇನಿತು ನೋಡಿರೋ ಮಿಗಿಲಾದ ಶತ ಜನ ಸಾ- ಧನ ದೇಹದವರೆಂದು…