Haridasa Sahitya — Vyasadasa

Taratamya Sulaadi 4 — Taratamya sulaadhi

ಸುಳಾದಿ ೪ — ತಾರತಮ್ಯ ಸುಳಾದಿ

Composer: Vijaya Dasaru · Deity: Vishnu / Hari · Genre: Sulaadi

Kannada lyrics

ತಾರತಮ್ಯ ಸುಳಾದಿ ರಾಗ ಹಂಸಧ್ವನಿ ಧ್ರುವತಾಳ ತೃಣಗುಲ್ಮಲತೆ ತೃಣರಾಜ ಮಿಕ್ಕಾದ ತರು ವನಚರ ಖಗ ಮೃಗ ನಾನಾ ಪರಿಯ ಮನುಜ ಕ್ಷಿತಿಪ ಮನುಜ ಗಂಧರ್ವ ಪರಿಯಂತ ಎಣಿಕೆ ಮಾಡಿದರಾಗೆ ಅವಿ ಭೋಕ್ತರು ಗುಣಿಸಿ ನೋಡಲು ಇದರ ಗಣಿತ ಅಪರಿಮಿತ ಕೊನೆ ತಿಳಿದವನಿಲ್ಲ ಎಂದೆಂದಿಗೆ ಇನಿತು ಚೇತನಗಳು ಲಕ್ಷಯೆಂಭತ್ತು ನಾಲ್ಕು ಯೋನಿ ಜನನ ಪ್ರಭೇದದಿಂದ ಪ್ರಾಚುರ್ಯರು ಗುಣದಿಂದ ಓರ್ವರೋರ್ವರಧಿಕವಾಗಿದ್ದರು ಜನುಮ ಜನುಮದಲ್ಲಿ ವೃತ್ತಿ ಜ್ಞಾನಾ ತನು ಭಿನ್ನರಾಗಿ ಪುಟ್ಟುವರು ಧರಣಿ ಮೇಲೆ ದಿನ ಪ್ರತಿದಿನ ಕರ್ಮವಶದಿಂದಲಿ ತನು ಸಮೇತವಲ್ಲದೆ ಏಕಾಂಶದಲ್ಲಿ ಸಲ್ಲಾ ಅನುಮಾನ ಇದಕಿಲ್ಲ ಇವರಿಗೆ ಪೆಸರು ಕಾಣೋ ಮನದೊಳು ತಿಳಿ ಇವರ ತರುವಾಯದಿ ಅನಿಮಿಷ ಗಂಧರ್ವ ಬೊಮ…