Haridasa Sahitya — Vyasadasa

Taratamya Sulaadi 3 — Guna taratamya sulaadhi

ಸುಳಾದಿ ೩ — ಗುಣ ತಾರತಮ್ಯ ಸುಳಾದಿ

Composer: Vijaya Dasaru · Deity: Vishnu / Hari · Genre: Sulaadi

Kannada lyrics

ಗುಣ ತಾರತಮ್ಯ ಸುಳಾದಿ ರಾಗ ಮೋಹನ ಧ್ರುವತಾಳ ಶ್ರೀವನಿತೆಯರಸಾ ಶೃಂಗಾರ ಗುಣನಿಧಿ ಪಾವನ್ನ ಮೂರುತಿ ಪರಮ ಪುರುಷಾ ಭಾವುಕ ಚರಿತಾ ಭವ ಭಯ ವಿದೂರ ಕೋವಿದಾ ಜಗದಂತರ್ಯಾಮೀ ಸ್ವಾಮಿ ದೇವ ದೇವೇಶಾ ಆತುಮಾ ಅಂತರಾತುಮಾ ತ್ರಿವಿಧ ಜೀವಿಗಳ ನಿರ್ಮಾಣನೇ ಕೈವಲ್ಯನಾಥಾ ಅತ್ಯಣು ಮಹಾ ಮಹತ್ತು ಠಾವಿನಲ್ಲಿ ಪೂರ್ಣಗುಪ್ತ ವ್ಯಾಪ್ತಾ ಕಾವ ಮುಕ್ತಾ ಮುಕ್ತರ ಇಚ್ಚಾಮಾತುರದಿಂದ ಯಾವತ್ತು ಕಾರಣ ಆದಿ ಪೊರ ಬೊಮ್ಮ ಆವಾವ ಕಲ್ಪದಲ್ಲಿ ಶಶ್ವದೇಕಪ್ರಕಾರ ಸ್ವಾ- ಭಾವಿತ ಪ್ರವರ್ತ ಲೀಲಾ ವಿನೋದ ಕಾವಳವಾದಾ ದುರ್ಘಟ ಭವಾಟವ್ಯಕೆ ಪಾವಕನೆನಿಸುವ ಪರದೇವತಿ ಸೇವಿಸುವ ಭಕ್ತರ ಕುಲಕೊಜ್ರಪಂಜರ ಜೀವಾದಿಗಳ ಭಿನ್ನ ಜನಾರ್ದನಾ ಸ್ಥಾವರ ಜಂಗಮ ಸಿರಿ ಪರಿಯಂತ ಗು- ಣಾವ…