Haridasa Sahitya — Vyasadasa
Taratamya Sulaadi 2 — Avarohana guna taratamya sulaadhi
ಸುಳಾದಿ ೨ — ಅವರೋಹಣ ಗುಣ ತಾರತಮ್ಯ ಸುಳಾದಿ
Composer: Vijaya Dasaru · Deity: Lakshminatha / Vishnu · Genre: Sulaadi
Kannada lyrics
ಅವರೋಹಣ ಗುಣ ತಾರತಮ್ಯ ಸುಳಾದಿ ರಾಗ ಕಲ್ಯಾಣಿ ಧ್ರುವತಾಳ ತ್ರಿಜಗ ವಂದಿತ ತ್ರಿಗುಣ ರಹಿತಾ ಲಕುಮಿನಾಥಾ ಅಜವಾತ ತಾತಾ ಅಂಡಜ ರಾಜಾ ವರೂಥಾ ಭುಜಗ ತಲಪನೀತಾ ಭುಜಗ ಭೂಷಿತ ದಾತಾ ಭುಜಗೋತ್ತಮ ಖ್ಯಾತಾ ವಿಜಯವಿಠಲ ಪ್ರೀತಾ ಸುಜನರ ಮನೋರಥಾ ನಿಜ ದೈವತಜ್ಞ ||೧| ಮಟ್ಟತಾಳ ಅಶೇಷ ದೋಷ ದೂರ ಗುಣ ಪರಿಪೂರ್ಣ ಅಶೇಷ ಅವತಾರ ಅಗಣಿತ ವರ್ನ ಅಶೇಷವಾನಂದ ಅದ್ಭುತ ಘನ್ನ ಸುಷೇಣನಾಮಾ ವಿಜಯವಿಠಲನು ಈಶ ಬೊಮ್ಮಾದ್ಯರಿಗೆ ವಿಶೇಷ ಮಹಿಮಾ ||೨|| ರೂಪಕತಾಳ ಇಂದಿರೇ ತರುವಾಯ ವಿಧಿಯು ಮಾರುತರು ಒಂದು ಕೋಟಿ ಗುಣದಿಂದ ಕಡಿಮೆ ಅವ- ರಿಂದಲವರ ಸ್ತ್ರೀಯರು ಒಂದು ನೂರು ಗುಣ- ದಿಂದಲಿ ಅಧಮರು ಎಂದು ತಿಳಿವದ- ಲ್ಲಿಂದ ಗರುಡ ಶೇಷ ಇಂದುಧರರಿವರು ಮೂವರು ಒಂದು…