Haridasa Sahitya — Vyasadasa

Vijaya dasaru suladhi(by Shyamasundara dasaru)

ಧ್ರುವತಾಳ

Composer: Vijaya Dasaru · Deity: Vijaya Dasaru · Genre: Dasara Pada

Kannada lyrics

ಧ್ರುವತಾಳ ನಿಷ್ಟೆಯಿಂದಲಿ ಮನ | ಮುಟ್ಟಿ ಭಜಿಸೊ ವಿಜಯ || ವಿಠಲದಾಸರ ಮನವೆ ನಿತ್ಯ || ಎಷ್ಟು ಹೇಳಲಿ ಇವರ ಉತ್ಕøಷ್ಟ ಮಹಿಮೆ ಕೃಪಾ | ದೃಷ್ಟಿಯಿಂದಲಿ ನೋಡಿದಾಕ್ಷಣದಿ || ಭ್ರಷ್ಟ ಮನಸಿಲಿಂದ | ಬಿಟ್ಟು ಧರ್ಮಾಚರಣೆ ಧೃಷ್ಟ ಕೃತ್ಯವಗೈದು ದೋಷದಿಂದ | ತಪ್ಪಿದ ದುರಿತೌಷ | ಮೊಟ್ಟೆಗಳೆಲ್ಲವು | ಸುಟ್ಟು ಭಸ್ಮೀ ಭೂತವಾದ ಬಳಿಕ ಪುಟ್ಟ ಸುಜ್ಞಾನ ಭಕ್ತಿ ವೈರಾಗ್ಯ ಭರಿತರಾಗಿ ಮೆಟ್ಟುವರೋ ಕೈವಲ್ಯ ಪಥವಾ || ಸೃಷ್ಟಿ ಸಂಹಾರಕರ್ತರಿದ್ದಲ್ಲಿ ಪೋಗಿ | ಸಿಟ್ಟಿನಿಂದಲಿ ಕೊಟ್ಟು ಶಾಪವನ್ನು ಥಟ್ಟನೆ ವೈಕುಂಟ ಪಟ್ಟಣಕ್ಕೆ ತೆರಳಿ ಪಟ್ಟದರಸಿಯಾದ ಲಕುಮಿ ಸಹಿತಾ ಸೃಷ್ಟ್ಯಾಂಡ ಭಾರ ಶಿರದಿ ಇಟ್ಟಂಥಾ ಫಣಿ ಪತಿಯಾ ಪಟ್ಟಿ ಪರ್ಯಂಕದಲ್ಲಿ ಪವಡಿಸಿ…

Transliteration

dhruvatALa niShTeyindali mana | muTTi Bajiso vijaya || viThaladAsara manave nitya || eShTu hELali ivara utkaøShTa mahime kRupA | dRuShTiyindali nODidAkShaNadi || BraShTa manasilinda | biTTu dharmAcaraNe dhRuShTa kRutyavagaidu dOShadinda | tappida duritauSha | moTTegaLellavu | suTTu BasmI BUtavAda baLika puTTa suj~jAna Bakti vairAgya BaritarAgi meTTuvarO kaivalya pathavA || sRuShTi saMhArakartaridd…