Haridasa Sahitya — Vyasadasa

Sarvasarabhokta sulaadhi

ಸರ್ವಸಾರಭೋಕ್ತ ಸುಳಾದಿ

Composer: Vijaya Dasaru · Deity: Hari · Genre: Sulaadi

Kannada lyrics

ಸರ್ವಸಾರಭೋಕ್ತ ಸುಳಾದಿ ರಾಗ ಪಂತುವರಾಳಿ ಧ್ರುವತಾಳ ಪುಣ್ಯವೆ ಪೋಯಿತೆಂಬ ನುಡಿಸಲ್ಲಾ ಎಲ್ಲೊ ನಲ್ಲಾ ಪುಣ್ಯವೆಂಬೊದು ಎಂತೊ ತಿಳಿಯದಯ್ಯಾ ಪುಣ್ಯ ಪೋಗುವದೆಂತೊ ಆವಾಗ ಕಣ್ಣಿಗೆ ಕಾಣಿಸದು ಶಬ್ದಮಾತ್ರ ಇನ್ನಿತು ಪುಣ್ಯವೆಲ್ಲ ಜ್ಞಾನಕಾರ್ಯವು ಮತ್ತೆ ಘನ್ನ ಪಾಪಗಳು ಅಜ್ಞಾನ ಕಾರ್ಯ ಅನ್ನಂತ ಕಾಲಕ್ಕೆ ದ್ವಿವಿಧ ರೂಪಕೆ ನೋಡೆ ಉನ್ನತವಾಗಿ ನೀನೆ ಸರ್ವದಲ್ಲಿ ಬನ್ನ ಬಡಿಸುವ ಅಜ್ಞಾನ ಜ್ಞಾನಕ್ಕೆ ಸಂಪನ್ನ ನಿರ್ದೋಷ ಮೂರ್ತಿ ನೀನೆ ವಿಷಯಾ ಇನ್ನಿತಾಗಿರಲಿಕ್ಕೆ ಮಾಡಿದಾ ಪುಣ್ಯ ಮುನ್ನೆ ಪೋಯಿತೆಂಬ ವಿನೋದವೆ ಇನ್ನು ನಾನೇನೆಂಬೆ ಈ ಮಾತಿಗೆ ಪ್ರಸನ್ನ ವದನಾಂಭೋಜ ವಿಮಲ ನಯನಾ ಅನ್ಯ ಜನರಿಂದ ಪಾಪ ಪುಣ್ಯವೆ ತಂದು ಉಣ್ಣಿಪದಾಗುವದೆ ವಿಚಾರಿಸೇ…