Haridasa Sahitya — Vyasadasa

Saptanna upasana prakara sulaadhi

ಸಪ್ತಾನ್ನ ಉಪಾಸನಾ ಪ್ರಕರಣ ಸುಳಾದಿ

Composer: Vijaya Dasaru · Deity: Hari · Genre: Sulaadi

Kannada lyrics

ಸಪ್ತಾನ್ನ ಉಪಾಸನಾ ಪ್ರಕರಣ ಸುಳಾದಿ ರಾಗ ಹಂಸಾನಂದಿ ಧ್ರುವತಾಳ ಅಪ್ರತಿಹತ ದ್ರವ್ಯಗತವಾಗುವದಕ್ಕೆ ಬಾ ಲ ಪ್ರಾಯ ವೃದ್ಧನಾಗಿ ಬಲು ಜನ್ಮವ ವಿಪ್ರವಾಸನಾಗಿ ಯಾತ್ರಿತೀರ್ಥವಾ ಚರಿಸಿ ಕ್ಷಿಪ್ರಗತಿಯಿಂದ ನಾನಾ ಯಾಗ ಯೋಗ ವಿಪ್ರರೊಡನೆ ರಚಿಸಿ ಅನೇಕ ದಾನಂಗಳ ದ್ಯು ಪೃಥಿವಿ ಪೊಗಳುವಂತೆ ಮಾಡಿದರೂ ಅಪ್ರಧಾನವಲ್ಲದೆ ಕರ್ಮದ ಸ್ವಾತಂತ್ರ ಅಪ್ರಬುದ್ಧರಿಗೆ ಇದು ಮೆಚ್ಚ ಕಾಣೋ ಅಪ್ರೀಯವಾಗುವದು ತಾತ್ವಿಕರಿಂದ ಹರಿಗೆ ಅಪ್ರೀಯನಾಗುವ ಅಲ್ಪಪುಣ್ಯ ಅಪ್ರಮೋದದಿಂದ ಉಂಡು ತೀರಿಸಿ ನಾನಾ ಪ್ರಕಾರ ದೇಹವ ಧರಿಸುವರು ಈ ಪ್ರಕರಣ ಬಿಟ್ಟು ಜ್ಞಾನವ ಸಂಪಾದಿಸಿ ಅಪ್ರಮೇಯ ಹರಿಯ ರೂಪಂಗಳ ಸಪ್ರಮಾಣದಲ್ಲಿ ತಿಳಿದು ಕೊಂಡಾಡಿ ನಿತ್ಯ ಸ್ವಪ್ರಕಾಶ ಗುಣದಿಂದ ಧ್…