Haridasa Sahitya — Vyasadasa
Panchapranahuti prakriya sulaadhi
ಪಂಚಪ್ರಾಣಾಹುತಿ ಪ್ರಕ್ರಿಯ ಸುಳಾದಿ
Composer: Vijaya Dasaru · Deity: Hari · Genre: Sulaadi
Kannada lyrics
ಪಂಚಪ್ರಾಣಾಹುತಿ ಪ್ರಕ್ರಿಯ ಸುಳಾದಿ ರಾಗ ಕಾಪಿ ಧ್ರುವತಾಳ ಆಹುತಿ ಕೊಡುವದು ಪಂಚ ಪ್ರಾಣರಿಗೆ ಸಂ- ದೇಹ ಮಾಡದಲೆ ಮನಸು ಪೂರ್ವಕದಿಂದ ದೇಹದೊಳಗೆ ಐದು ಸ್ಥಾನಂಗಳು ತಿಳಿದು ಸ್ವಾಹಲೋಲನ್ನ ಪ್ರೀತಿ ಬಡಿಸಿ ಉಣಿಸು ಆಹಾರ ಮೆಲುವಾಗ ಮರಿಯಲಾಗದು ಅತಿ ಸ್ನೇಹಭಾವದಿಂದ ಸರ್ವದಲ್ಲಿ ಮಹ ಪುಣ್ಯ ಬಪ್ಪದು ಮಾಡಿದಾಘರಣ್ಯ ದಹನವಾಗುವದು ತಡವಿಲ್ಲದೇ ಗಹನವಿದು ಕೇಳಿ ಕಂಡವರಿಗಿಲ್ಲಾ ಇಹಲೋಕದಲ್ಲಿ ಸಿದ್ಧಾಂತ ತಿಳಿದು ಮೋಹಕ ಶಾಸ್ತ್ರ ಜರಿದು ಮದ ಮತ್ಸರ ಹರಿದು ಕುಹಕ ಬುದ್ಧಿ ಬಿಟ್ಟು ಉಚಿತದಲ್ಲಿ ಶ್ರೀಹರಿ ವೈಶ್ವಾನರನೆಂಬೊ ನಾಮ ಚತುರ ಯೂಹಗಳಿಪ್ಪವೆನ್ನಿ ಅಲ್ಲಿಗಲ್ಲಿ ಬಹಳಾಧಿಷ್ಠಾನದಲ್ಲಿ ಶುಭಸಾರ ಭುಂಜಿಸುವಾ ದ್ರೋಹಿ ಮಾನವರ ತೊರೆದು ತಿಳಿಯ…