Haridasa Sahitya — Vyasadasa

Panchapranagnihotra sulaadhi

ಪಂಚಪ್ರಾಣಾಗ್ನಿಹೋತ್ರ ಸುಳಾದಿ

Composer: Vijaya Dasaru · Deity: Hari · Genre: Sulaadi

Kannada lyrics

ಪಂಚಪ್ರಾಣಾಗ್ನಿಹೋತ್ರ ಸುಳಾದಿ ರಾಗ ಮುಖಾರಿ ಧ್ರುವತಾಳ ಶ್ರೀಗುರುವಿನ ನೆನೆದು ನಿರ್ಮಳನಾಗಿ ಸರ್ವ- ಯಾಗ ಭೋಕ್ತನಾದ ನಾರಾಯಣಗೆ ಬಾಗಿ ಭಕ್ತಿಯಿಂದ ಚಿಂತಿಸಿ ಹೃದಯದಲ್ಲಿ ಆಗಮ ಸ್ತುತಿಯಿಂದ ವಿಹಿತ ತಿಳಿದೂ ಭೋಗಗಳೆಲ್ಲ ಸರ್ವಯಾಗಗಳೆಂದು ಲೇಸಾಗಿ ಸಂಚರಿಪದು ಸತತವಾಗಿ ಈ ಗಾತ್ರದಲ್ಲಿ ಪಂಚ ಪ್ರಾಣ ಯಜ್ಞ ಸ್ಥಳಗಳು ಭಾಗಂಗಳುಂಟು ಒಂದೊಂದು ಕಡೆ ಮೊಗದಲ್ಲಿ ಪ್ರಾಣನೆಂಬೊ ಹೋತ್ರನು ವಾಸವಾಗಿಪ್ಪಪಾನ ದೆಶೆಯಿಂದ ಉದ್ಘಾತ್ರನಾಗಿಪ್ಪ ಯಜಮಾನನಾಗಿಪ್ಪ ವ್ಯಾನನೆಂಬುವನು ನಾಭಿಯಲ್ಲಿ ವೇಗ ಕಂಠದಲ್ಲಿ ಉದಾನನೆಂಬೋಽಧ್ವರಿಯ ಪೂಗರ್ಭನಾಮಕ ಸಮಾನ ಸರ್ವಾಂಗದಲ್ಲಿ ಈ ಗಣಿತದೈವರು ಪ್ರಾಣ ರೂಪಗಳಿಂದ ಯಾಗದಧಿಕಾರಿಗಳ ದೇಹದೊಳಗೆ ಯೋಗಿಜನನುತ ವಿಜಯವಿ…