Haridasa Sahitya — Vyasadasa

Panchakosha vivara sulaadhi 2

ಪಂಚಕೋಶಗಳ ವಿವರ ಸುಳಾದಿ - 2

Composer: Vijaya Dasaru · Deity: Hari · Genre: Sulaadi

Kannada lyrics

ಪಂಚಕೋಶಗಳ ವಿವರ ಸುಳಾದಿ - 2 ರಾಗ ಶಂಕರಾಭರಣ ಧ್ರುವತಾಳ ಚಿದ್ದೇಹಾಕಾರ ಆನಂದಮಯವಯ್ಯಾ ಬದ್ಧ ದೇಹಾಕಾರ ವಿಜ್ಞಾನಮಯವಯ್ಯಾ ಅನಿರುದ್ಧ ದೇಹಾಕಾರ ಮನೋಮಯವಯ್ಯಾ ಶುದ್ಧ ಪ್ರಾಕೃತಾಕಾರ ಪ್ರಾಣಮಯವಯ್ಯಾ ಶುದ್ಧ ಭೌತಿಕಾಕಾರ ಅನ್ನಮಯವಯ್ಯ ವಾಸುದೇವಾದಿ ಮೂರುತಿ ನಾರಾಯಣಾ ಚಿದ್ದೇಹದಲ್ಲಿ ತಿಳಿ ಆನಂದಮಯಗೆ ಪದ್ಧತಿವುಂಟು ಉಳಿದದಕೆ ಚತುರನಾಮ ವಿದ್ಯುಚ್ಚುಭ್ರ ರಕ್ತ ಪೀತ ಶಾಮವರ್ಣ ಹೃದ್ಗತ ತತ್ತದ್ದೇಹವಾಸ ಅನಿರುದ್ದಾದಿ ಮೂರ್ತಿಗಳ ವ್ಯತ್‌ಮದಿಂದ ಗುಣಿಸು ಅನಾದ್ಯ ಅವಿದ್ಯಾ ಕರ್ಮ ಕಾಲ ಗುಣ ತತ್ವ ಹೊದ್ದಿಕೊಂಡಿಪ್ಪವಯ್ಯಾ ಆಲಿಂಗದಲ್ಲಿ ಅಯ್ಯಾ ಅಯ್ಯಾ ಅಯ್ಯಾ ಚಿದ್ದೇಹಾತ್ಮಕ ಜೀವನ ಆಕೃತಿ ಅವ್ಯಕ್ತ ಮಹದ್ದಾಹಂಕಾರ ಚೇತನ ಚಿತ್ತ ಬುದ್ಧಿ…