Haridasa Sahitya — Vyasadasa

Panchakosha vivara sulaadhi 1

ಪಂಚಕೋಶಗಳ ವಿವರ ಸುಳಾದಿ - 1

Composer: Vijaya Dasaru · Deity: Hari · Genre: Sulaadi

Kannada lyrics

ಪಂಚಕೋಶಗಳ ವಿವರ ಸುಳಾದಿ - 1 ರಾಗ ಹಿಂದೋಳ ಧ್ರುವತಾಳ ನವಪಂಚ ಪಂಚ ಮೇಲೆ ಆರಂಗುಲಿ ಪ್ರಮಾಣ ಅವಯವಂಗಳ ಸಹಿತ ಇಪ್ಪ ಗಾತ್ರ ನವಕೋಟಿ ರೋಮದಿಂದ ಯುಕ್ತವಾಗಿಪ್ಪದು ನವಕೋಟಿ ದೇವತೆಗಳು ಅಭಿಮಾನ್ಯರು ಇವರು ಶತಸ್ಥರೊಳು ಪಂಚಪ್ರಾಣರ ತರುವಾಯ ಭವದೂರರಾಗಿ ಸರ್ವದಲ್ಲಿಪ್ಪರು ನವದ್ವಿ ದ್ವಾರಗಳಿಂದ ಶೋಭಿಸುತಿದೆ ನೋಡೆ ತ್ರಿವಿಧ ಗುಣಗಳುಂಟು ಒಂದು ಕ್ಷಣಕೆ ನವದ್ವಿ ಯಿಂದ್ರಿಂಗಳು ಅಲ್ಲಿಗಲ್ಲಿಗೆ ಇಪ್ಪ ವಿವರವನ್ನೆ ತಿಳಿವದು ಇವು ತೈಜಸದಿ ದಿವಿಜೋತ್ತಮರು ತತ್ತದ್ವಾಪಾರವನ್ನೆ ಬಿಡದೆ ತವಕದಿಂದಲಿ ಮಾಳ್ವರು ಹರಿ ಪ್ರೇರಣೆ ಸುವಿರುದ್ಧವಾದರು ಇವರಿಗೆ ದೋಷವಿಲ್ಲ ಕವಿಗಳು ಕಾಣೋ ಸದಾ ಸಾಂಶರು ಭುವನದ ಹೊರಗೆ ಇವರು ತಮ ತಮ್ಮ ತತ್ವದಲ್ಲಿ ಅವ…