Haridasa Sahitya — Vyasadasa

Paitruka sulaadhi

ಪೈತೃಕ ಸುಳಾದಿ

Composer: Vijaya Dasaru · Deity: Hari · Genre: Sulaadi

Kannada lyrics

ಪೈತೃಕ ಸುಳಾದಿ ಪಿತೃಗಳ ಶ್ರಾದ್ಧ ವಿಚಾರಾಂಶಪಿತೃಋಣಮೋಚನ ಕರ್ಮದಿಂದ ಬಿಡುಗಡೆ . ಜೀವ ಜೀವ ಬೇಧ ಜ್ಞಾನ ದ್ವಾರಾಮುಕ್ತಿ ರಾಗ ಶಂಕರಾಭರಣ ಧ್ರುವತಾಳ ಪೈತೃಕ ವಾರದಲ್ಲಿ ದೇವಾಂಶಿ ಅಂಶಿಗಳ ಸ್ತೋತ್ರವ ನಾಲ್ಕು ಯುಗದವರ ಸೇವಾ ಸೂತ್ರನಾಮಕ ಪ್ರಾಣ ಮೊದಲಾದ ದೇವತಿಗಳ ಚಿತ್ರ ವಿಚಿತ್ರ ಮಹಿಮೆ ತಿಳಿದು ತಿಳಿದು ಪುತ್ರ ಪೌತ್ರ ಪ್ರಪೌತ್ರ ವಂಶಾಭಿವೃದ್ಧಿಯಿಂದ ಗಾತ್ರ ನಿರ್ಮಳರಾಗಿ ಬಾಳುವರೋ ಗೋತ್ರ ನೂರೊಂದು ನಾನಾ ಜನುಮ ಧರಿಸಿದ ವೀತಿಹೋತ್ರಾದಿ ಲೋಕದಲ್ಲಿ ಇದ್ದ ಜನರು ಪಾತ್ರ ಸತ್ಪಾತ್ರರಾಗಿ ತೃಪ್ತಿಯಾಗುವರು ಕಾಲತ್ರಯ ಬಿಡದಲೆ ಊರ್ಧ್ವಗತಿಗೆ ನೇತ್ರುತ್ಸಾಹದಿಂದ ಸಾಗಿ ಸಾರುವರು ಸಗೋತ್ರರೊಡನೆ ಹರಿಯ ಕೊಂಡಾಡುತ ಪ್ರೋತ್ರದಿಂದಲಿ ಇದು…