Haridasa Sahitya — Vyasadasa
Naivedya samarpane sulaadhi
ನೈವೇದ್ಯ ಸಮರ್ಪಣೆ ಸುಳಾದಿ
Composer: Vijaya Dasaru · Deity: Hari · Genre: Sulaadi
Kannada lyrics
ನೈವೇದ್ಯ ಸಮರ್ಪಣೆ ಸುಳಾದಿ ರಾಗ ಕಾಂಬೋಧಿ ಧ್ರುವತಾಳ ಸಮರ್ಪಣೆ ಪ್ರಕಾರ ತಿಳಿವದು ಚೆನ್ನಾಗಿ ಸಮ ಬುದ್ಧಿವುಳ್ಳ ಜನರು ಸತತದಲ್ಲಿ ಹಿಮಶೇತು ಮಧ್ಯದಲ್ಲಿ ಪುಟ್ಟಿದ ದೇಶದೊಳಗೆ ಕ್ರಮ ಉಂಟು ಸ್ವಲ್ಪ ಪ್ರದೇಶ ಧರಣಿ ಶಮದಮೆ ಉಳ್ಳ ಮಧ್ವಮತದಲ್ಲಿ ಪೊಂದಿದ್ದ ಸುಮನೋಹರ ಜೀವಿಗಳಿಗೆ ಪೇಳತಕ್ಕ ಪ್ರಮೇಯ ಇದು ಕೇವಲ ಹರುಷ ರಹಸ್ಯ ಆಗಮದಲ್ಲಿ ಸಾರಿ ಪೇಳುತಿದೆ ಉತ್ತಮ ರಮೆಯರಸನ್ನ ದಿವ್ಯ ವಿಗ್ರಹ ಮನಸಿಗೆ ರಮಣೀಯವಾದದ್ದು ಲಕ್ಷಣೋಪೇತ ದ್ಯುಮಣಿ ಪ್ರಕಾಶದಂತೆ ಒಪ್ಪುತಿಪ್ಪದು ಆತುಮ ಅನಾತುಮದೊಳು ಚಿಂತನೆ ಗೈದು ಸಮ ವಿಷಮದಲ್ಲಿ ಗೋಳಕವ ನೆನೆದು ಮಹಿಮೆಯನ್ನು ಮರಳಿ ಮರಳಿ ಧೇನಿಸುತ್ತ ತಮೊಗುಣದ ಕಾರ್ಯವನ್ನು ಹಿಂಗಳದು ಶುದ್ಧ ಸತ್ವ ಮಮತೆಯಿಂದಲ…