Haridasa Sahitya — Vyasadasa
Mantra Mahatma Sulaadi 12 — Dhyana mahima sulaadhi
ಸುಳಾದಿ ೧೨ — ಧ್ಯಾನ ಮಹಿಮಾ ಸುಳಾದಿ
Composer: Vijaya Dasaru · Deity: Vishnu / Vitthala · Genre: Sulaadi
Kannada lyrics
ಧ್ಯಾನ ಮಹಿಮಾ ಸುಳಾದಿ ರಾಗ ಹಂಸಾನಂದಿ ಧ್ರುವತಾಳ ಪ್ರತಿಪಾದ್ಯ ಭಗವನ್ಮೂರ್ತಿಗಳುಂಟು ನಿತ್ಯಾನಿತ್ಯ ಶ್ರುತಿ ಪುರಾಣ ಮಿಗಿಲಾದ ಓದಿನಲ್ಲಿ ತುತಿಸಿ ಕೊಂಡಾಡುವದು ಒಂದೊಂದು ರೂಪಂಗಳ ಗತಿಗೆ ಸಾಧನ ಕಾಣೋ ಸಂಶಯವಿಲ್ಲಾ ಸ್ಥಿತವಾಗಿ ಇಪ್ಪದು ಋಗುವೇದ ಯಜು ಸಾಮಾ - ತ್ರಿತಿಯಕ್ಕೆ ವಾಸುದೇವ ಸಂಕರುಷಣ ಪ್ರದ್ಯುಮ್ನ ಇತಿಹಾಸ ಪುರಾಣ ಅಥರ್ವಣ ವೇದಕ್ಕೆ ಮೂ - ರುತಿ ಅನಿರುದ್ಧನೆನ್ನು ಸರ್ವಾಗಮ ಪ್ರತಿಪಾದ್ಯ ನಾರಾಯಣ ಇವರ ವರ್ನಂಗಳ ರ - ಕುತ ಶುಭ್ರ ಪೀತ ನೀಲ ಪ್ರೋದ್ಯದಾದಿತ್ಯ ಪೃಥಿವಿಸ್ಥ ವರಾಹರೂಪ ಸಂಹ್ವಕ್ಕೆ ವೊಪ್ಪು ತಲಿಹ ದ್ಯುಸ್ತ ವಾಮನನು ಪದಕ್ಕೆ ಚತುರಾನನ ನರಹರಿ ಕ್ರಮಕೆ ಅಂತರಿಕ್ಷಸ್ಥ ಮೂ ರುತಿ ಕಾಣೋ ಎಂದೆಂದಿಗೆ ತಿಳಕೊಂಬೋ…