Haridasa Sahitya — Vyasadasa
Mantra Mahatma Sulaadi 11 — Kankankakara sulaadhi
ಸುಳಾದಿ ೧೧ — ಕಂಕಣಾಕಾರ ಸುಳಾದಿ
Composer: Vijaya Dasaru · Deity: Vishnu / Vitthala · Genre: Sulaadi
Kannada lyrics
ಕಂಕಣಾಕಾರ ಸುಳಾದಿ ರಾಗ ಸಾವೇರಿ ಧ್ರುವತಾಳ ಕಂಕಣಾಕಾರವನ್ನು ಬರೆದು ಅದರ ಮಧ್ಯ ಓಂಕಾರ ಎರಡು ಎಡ - ಬಲದಿ ರಚಿಸಿ ಶಂಕೆ ಇಲ್ಲದೆ ನಡುವೆ ಘ್ರಣಿಯೆಂದು ಲಿಪಿಸಿ ಮೀ - ನಾಂಕನಯ್ಯನ ಪೀಠಸ್ಥಳವಿದೆಂದು ಬಿಂಕದಲಿ ಸ್ವರದೊಳಗೆ ಕಡಿಯಣಾ ಸ್ವರವೆರಡಾ - ಲಂಕಾರವನೆ ಮಾಡಿ ಅದರ ಬಳಿಯ ಕಂಕಣಾಕಾರವನ್ನು ಒಳಗೆ ಮಾಡಿಕೊಂಡು ಮಂಕುಮತಿಯ ತೊರೆದು ತ್ರಿಕೋಣಸುತ್ತಿಸಿ ಶ್ರೀಂಕಾರ ಇಚ್ಛಾಶಕ್ತಿ ಕ್ಲೀಂಕಾರ ಕ್ರಿಯಾಶಕ್ತಿ ಶ್ರೀಂಕಾರ ಜ್ಞಾನಶಕ್ತಿ ಮೂರು ಮೂಲೆಗೆ ಬರೆಯೊ ಪಂಕಜ ಪಾಣಿಯು ಶ್ರೀ - ಭೂ - ದುರ್ಗಾನಾಮಕಳು ಪಂಕಜಾಕ್ಷನ ರೂಪ ಮೂರು ಉಂಟು ಕಂಕಣಾಕಾರ ಮರಳೆ ತ್ರಿಕೋಣ ಮೇಲೆ ಬರೆದು ಸಂಕೋಚವಾಗಿ ಇದೆ ದ್ವಿತೀಯ ವಲಯ ಪಂಕಜ ಮಿತ್ರ ಸೋಮ ಅಗ್ನಿ ಜ…