Haridasa Sahitya — Vyasadasa

Mantra Mahatma Sulaadi 9 — Hamsa mantra sulaadhi

ಸುಳಾದಿ ೯ — ಹಂಸಮಂತ್ರ ಸುಳಾದಿ

Composer: Vijaya Dasaru · Deity: Vishnu / Vitthala · Genre: Sulaadi

Kannada lyrics

ಹಂಸಮಂತ್ರ ಸುಳಾದಿ ರಾಗ ಭೈರವಿ ಧ್ರುವತಾಳ ಚೇತನಾಚೇತನಾಂತರ್ಗತ ಭಗವದ್ರೂಪ ಚಾತುರ್ಯದಿಂದ ಉಂಟು ಅಣು ಮಹತ್ತು ಆತುಮದೊಳು ನೆನೆಸಿ ನಾನಾ ಬಗೆಯಿಂದ ಗಾತುರ ಇಂದ್ರಿಯಂಗಳ ಕಾರ್ಯ ತಿಳಿದು ಭೌತಿಕ ನೆಚ್ಚದಿರು ಕಾಯ ನಿಂದಿರದು ಜೀ - ಮೂತ ಛಾಯವೆನ್ನು ಇಹದ ಸೌಖ್ಯ ಮಾತು ಈ ಪರಿ ತಿಳಿದು ಮುದದಿಂದ ಪುಣ್ಯಕ್ಕೆ ಸಂ - ಕೇತ ಮಾಡುವೆ ಮಾಳ ಮಂತ್ರಗಳಿಗೆ ಶ್ವೇತದ್ವೀಪವಾಸಿ ವಾಸುದೇವ ಮುಖ್ಯ ವಾತ ಖದ್ಯೋತ ಗುರು ಇವರಲ್ಲಿಟ್ಟು ಆ ತರುವಾಯ ತನ್ನ ಹೃತ್ಕಮಲದಲ್ಲಿದ್ದ ಶ್ರೀತರುಣೀಶನ್ನ ಧ್ಯಾನಗೈದು ಈತನು ಮಧ್ಯದಲ್ಲಿ ಅನಂತ ಅಂಶಾತ್ಮಕ ಆತನ್ನ ತಂದು ಏಕ ಚಿಂತನೆಗೈದು ವಾತ ಸ್ಪರಶವಿಲ್ಲದ ದೀಪದಂತೆ ಕುಳಿತು ಜ್ಞಾತಾನುಷ್ಠಾನದಿಂದ ಗಮನಾಗಮನವ ನೋಡು…