Haridasa Sahitya — Vyasadasa

Mantra Mahatma Sulaadi 8 — Ajadi sulaadhi

ಸುಳಾದಿ ೮ — ಅಜಾದಿ ಸುಳಾದಿ

Composer: Vijaya Dasaru · Deity: Vishnu / Vitthala · Genre: Sulaadi

Kannada lyrics

ಅಜಾದಿ ಸುಳಾದಿ ರಾಗ ಭೌಳಿ ಧ್ರುವತಾಳ ಚಿಂತನೆ ಮಾಡು ಮನವೆ ಚಿನ್ಮಯದೇವನ್ನ ಯೇ - ಕಾಂತದಲಿ ಯಿದ್ದು ಎಲ್ಲ ಕಾಲಾ ಸಂತರ ವೊಡಗೂಡಿ ಸಾರಿಸಾರಿಗೆ ನಿನ್ನ ಅಂತರಂಗದಲ್ಲಿ ಆಲೋಚಿಸಿ ನಿಂತಲ್ಲಿ ಕುಳಿತಲ್ಲಿ ನಾನಾ ವ್ಯಾಪಾರದಲ್ಲಿ ಚಿಂತಿಸು ಶ್ರೀಹರಿಯಾನಂತ ರೂಪ ಎಂತೆಂತು ನೋಡಿದರದರಂತೆ ತೋರುತಲಿಪ್ಪ ಮಂತ್ರ ತಂತ್ರಕ್ಕೆ ಶಿಲುಕನು ಭಕ್ತಿಗೊಶನೊ ಸಂತತ ನಿರ್ದೋಷ ಭಕ್ತವತ್ಸಲ ಕರುಣಿ ಅಂತಕನಂತಕವು ಉಭಯ ಜೀವಿಗಳಿಗೆ ಸಂತೋಷದಲಿ ಚರಿಯಾ ಮಾತ್ರ ಲೀಲಾ ಕಂತುಕೋಟಿ ಲಾವಣ್ಯ ಮಿಗೆ ಶೋಭಿಸುವ ಆ - ದ್ಯಂತ ಕಾಲರಹಿತ ತ್ರಿಗುಣಾತೀತ ಸಂತಾಪನಾಶ ವೊಂದಾರಂಭಿಸಿಕೊಂಡಾ - ನಂತ ಸೂರ್ಯಪ್ರಕಾಶ ತರತಮ್ಯದಿ ತಂತುನಾಳದಿಂದ ದಿಗಂತಿ ಬಿಡಿಸಿಕೊಂಡು ನಿಂತಂತೆ…