Haridasa Sahitya — Vyasadasa
Mantra Mahatma Sulaadi 7 — Sri Hari mahima sulaadhi
ಸುಳಾದಿ ೭ — ಶ್ರೀಹರಿ ಮಹಿಮಾ ಸುಳಾದಿ
Composer: Vijaya Dasaru · Deity: Vishnu / Vitthala · Genre: Sulaadi
Kannada lyrics
ಶ್ರೀಹರಿ ಮಹಿಮಾ ಸುಳಾದಿ ರಾಗ ನಾಟಿ ಧ್ರುವತಾಳ ಸತ್ಯ ಸಂಕಲ್ಪ ಸಿದ್ಧ ಅನಾದಿದೈವ ಸತ್ಯಸತ್ಯವು ನಿನ್ನ ಮಹಿಮೆ ಪ್ರತಾಪ ಸತ್ಯವೆ ನಿನ್ನ ಗುಣ ಜ್ಞಾನ ಪರಿಪೂರ್ಣ ಸತ್ಯವೆ ನಿನ್ನ ಚರಿತೆ ಸೂತ್ರಧಾರಕನೆ ಸತ್ಯವೆ ನಿನ್ನ ಲೀಲೆ ಜಗವ ನಡಿಸುವದು ಸತ್ಯವೆ ನಿನ್ನಾನಂದ ಸಕಲೈಶ್ವರ್ಯ ಸತ್ಯವೆ ನಿನ್ನ ಕಪಟನಾಟಕ ತನವು ಸತ್ಯವೆ ನಿನ್ನ ವ್ಯಾಪ್ತಿ ಅಣೋರಣಿಯಲ್ಲಿ ಸತ್ಯಪರಾಕ್ರಮ ವಿಜಯವಿಟ್ಠಲ ನೀನೆ ಸತ್ಯವಂತನಲ್ಲದೆ ಮತ್ತಾರು ವುಂಟೆ || 1 || ಮಟ್ಟತಾಳ ವರಣ ಭರಿತದಲಿ ವರಣ ನಿಯಾಮಕನಾಗಿ ವರಣಾಂತರ್ಯಾಮಿ ವರಣ ನಾಮಕದಲ್ಲಿ ಕರಸಿಕೊಂಡೆ ಓಂಕಾರವೆಂಬೊ ಶಬ್ದಾ - ಕ್ಷರಮೂರರಿಂದ ಪರಿಮಿತವಾಗಿ ಪರತರ ಪರದೂರ ವಿಜಯವಿಟ್ಠಲ ಹಿರಣ್ಯನಾಭನೆ ಸಿರಿದೇವಿಯರ…