Haridasa Sahitya — Vyasadasa
Mantra Mahatma Sulaadi 6 — Pranava mantra sulaadhi
ಸುಳಾದಿ ೬ — ಪ್ರಣವ ಮಂತ್ರ ಸುಳಾದಿ
Composer: Vijaya Dasaru · Deity: Vishnu / Vitthala · Genre: Sulaadi
Kannada lyrics
ಪ್ರಣವ ಮಂತ್ರ ಸುಳಾದಿ ರಾಗ ಸಾರಂಗ ಧ್ರುವತಾಳ ಪ್ರಣವ ಮಂತ್ರವ ಗ್ರಹಿಸು ಪ್ರಣುತನಾಗಿ ಸ ಜ್ಜನರುಪದೇಶದಿಂದ ಅನುಗ್ರಹ ನೋಡುವದು ಅನಾದಿಯಿಂದ ಬಂದ ಅನುಭವಸಿದ್ದ ಜನಕೆ ಅಮೃತಾಶನ ಪ್ರಣವ ತಾರಕ ತಾರ ಪ್ರಥಮ ವ್ಯಾಹೃತಿ ಶೀರ್ಷ ಘನ ಓಂಕಾರ ಆದ್ಯೋಚ್ಚರಣೆ ಬೀಜ ಇನಿತಾಭಿಧಾನದಿಂದ ವೊಪ್ಪುತದಲೆ ನಿತ್ಯ ಅನಂತ ವರ್ಣಾತ್ಮಕ ಜಡ ಪ್ರಭೇದ ಮನುಜಾದಿ ವಿಡಿದು ಬ್ರಹ್ಮ ಸಿರಿತನಕಾಲೋ - ಚನೆ ಮಾಡುವರು ತಮ್ಮ ಯೋಗ್ಯತದನಿತು ಪ್ರಣವೆ ಮಂತ್ರವೆ ಸರ್ವ ಮಂತ್ರತಂತ್ರಕೆ ಯಿದೆ ಜನಕವಾಗಿಪೊದು ಕಲ್ಪ ಕಲ್ಪ ಪ್ರಣವ ಮಂತ್ರವೆ ಗ್ರಹಿಸು ಎಲೊ ಮನವೆ ಗುಣ ಕಾಲ ಕರ್ಮ ವರ್ಣಾಶ್ರಮ ಧರ್ಮ ರೂಪ ಕ್ರೀಯ ಮನೊವಾಚಕಾಯದಲ್ಲಿ ನಿರ್ಮಳನಾಗಿ ಎಣಿಸಬೇಕು ಅನುಕ್ರಮದಿಂದಲಿ…