Haridasa Sahitya — Vyasadasa
Mantra Mahatma Sulaadi 5 — Mantra mahatma sulaadhi
ಸುಳಾದಿ ೫ — ಮಂತ್ರ ಮಹಾತ್ಮ ಸುಳಾದಿ
Composer: Vijaya Dasaru · Deity: Vishnu / Vitthala · Genre: Sulaadi
Kannada lyrics
ಮಂತ್ರ ಮಹಾತ್ಮ ಸುಳಾದಿ ರಾಗ ಹಿಂದೋಳ ಧ್ರುವತಾಳ ಮಂತ್ರ ಮಾಡೆಲೊ ಮನುಜಾ ಮನೋವಾಚಾಕಾಯದಲ್ಲಿ ಸಂತತ ಮೂರು ಬಗೆ ಗುಣವ ತಿಳಿದು ತಂತು ಬಲಿಸಿದಂತೆ ತ್ವಕುವೇಂದ್ರಿ ಮೊದಲಾದ ಇಂತಿಪ್ಪ ಕರಣಂಗಳು ಪಿಂತೆ ಮಾಡಿ ಚಿಂತ ಸಂತಾಪ ಲೇಪದೂರ ದುರ್ಜಯ ಸಿರಿ - ಕಾಂತನ್ನ ಪಾದಪದ್ಮಕ್ರಾಂತನಾಗಿ ಮುಂತೆ ಬರುವ ಜನುಮ ಕಳಕೊಂಬೊದೊಂದೆ ಮರಳೆ ಪಿಂತೆ ದುಷ್ಕರ್ಮವೆಂಬೊ ಮಹಾಸಾಗರ ಶಾಂತವಾಗುವದೊಂದು ಈರ್ವಗೆ ಯೋಗ ಏಕಾಂತ ಭಕ್ತಿ ಸಂಪಾದಿಸಿ ಜಪಿಸು ಮಂತ್ರ ಅಂತರಂಗದಲ್ಲಿ ಸದ್ಗುರು ರವಿಮಂಡಲ ಮಂತ್ರಿಪ್ರಧಾನ ಮುಖ್ಯಪ್ರಾಣನಲ್ಲಿ ಅಂತರಾತುಮ ಶ್ವೇತದ್ವೀಪ ನಿವಾಸಿಯಲ್ಲಿ ಚಿಂತಿಸು ಉತ್ತರೋತ್ತರ ಶುಭ ತರಂಗ ಮಂತ್ರಾರ್ಥವನ್ನೆ ತಿಳಿದು ಹೃದಯಾದಲ್ಲಿ ತತ್ತನ್ಮೂ…