Haridasa Sahitya — Vyasadasa

Mantra Mahatma Sulaadi 3 — Pranava mantra sulaadhi

ಸುಳಾದಿ ೩ — ಪ್ರಣವ ಮಂತ್ರ ಸುಳಾದಿ

Composer: Vijaya Dasaru · Deity: Vishnu / Vitthala · Genre: Sulaadi

Kannada lyrics

ಪ್ರಣವ ಮಂತ್ರ ಸುಳಾದಿ ರಾಗ ಭೌಳಿ ಧ್ರುವತಾಳ ತಾರ ಮಂತ್ರವೆ ಜಪಿಸು ತವಕದಿಂದಲಿ ಭವ - ತಾರವಾಗುವದು ಲಾಲಿಸು ಚನ್ನಾಗಿ ಈರೆರಡು ಶೀರ್ಷ ಪಿಂಡೀಕೃತವಾದ ಓಂ - ಕಾರ ನಿರಂತರ ಸಾರವೆನ್ನು ಏಕಾವರ್ಣ ಶ್ರೀರಮಣ ನಾರಾಯಣನ ಪ್ರತಿಪಾದಿಸುತ್ತಿದೆ ಮೀರಿದ ದೈವವೆಂದು ಒಲಿಸಿ ಒಲಿಸೀ ತಾರತಮ್ಯವೆ ಉಂಟು ಇದನೆ ಗ್ರಹಿಸುವಲ್ಲಿ ಆರಾರ ತಕ್ಕ ಯೋಗ್ಯತ ಸಾಧನ ಭಾರತದಲ್ಲಿ ಕೇಳು ವೈದಿಕ ಲೌಕಿಕ ವ್ಯವ - ಹಾರ ಮಾತಿಗೆ ಇದೆ ಪ್ರಥಮ ವ್ಯಕ್ತಿ ಕಾರಣ ಕಾರ್ಯದಲ್ಲಿ ವ್ಯಾಪ್ತವಾಗಿದೆ ವಿ - ಸ್ತಾರ ಬೊಮ್ಮಾಂಡದೊಳು ನಿಬಿಡಿಯಾಗಿ ದ್ವೀರಷ್ಟ ಪಂಚ ಪಂಚ ಚತುರಷ್ಟಾ ಚಮುತಾಗಿ ಚಾರು ಪ್ರಕಾಶದಿಂದ ಅಭಿವ್ಯಕ್ತಿಯೊ ಆರು ಎರಡರಿಂದ ತಿಳಿಯಬೇಕು ಮೂರುತಿ ವಿಶ್ವ ತೈಜ…