Haridasa Sahitya — Vyasadasa

Mantra Mahatma Sulaadi 2 — Asana pranayamadi sadhana sulaadhi

ಸುಳಾದಿ ೨ — ಆಸನ ಪ್ರಾಣಾಯಾಮಾದಿ ಸಾಧನ ಸುಳಾದಿ

Composer: Vijaya Dasaru · Deity: Vishnu / Vitthala · Genre: Sulaadi

Kannada lyrics

ಆಸನ ಪ್ರಾಣಾಯಾಮಾದಿ ಸಾಧನ ಸುಳಾದಿ ರಾಗ ಸಾರಂಗ ಧ್ರುವತಾಳ ಪ್ರಣವ ಪೂರ್ವಕದಿಂದ ಆಸನವಿಟ್ಟು ಮೂರರೊಳೊಂ - ದನೆ ತಿಳಿದು ವಾಯುಧಾರಣೆ ಮಾಡು ವಿವೇಕನಾಗಿ ಬಿನಗು ಇಂದ್ರಿಯಂಗಳು ಮನದಲ್ಲಿ ಕೂಡಿಟ್ಟು ಅನುನಯದಿಂದ ಸಾಧನಕೆ ಮಾರ್ಗವ ಬಯಸೊ ಘನೀಭೂತವಾದ ಭಕುತಿಯನು ಸಂಪಾದಿಸಿ ನಿತ್ಯ ತನುವೆ ನಿರ್ಮಲನಾಗಿ ಜನರಹಿತ ಸ್ಥಳದಲ್ಲಿ ಅನುದಿನ ದುಷ್ಟಯೋಚನೆಗಳ ತೊರೆದು ಚಿನುಮಯನಾಗಿಪ್ಪ ವಿಜಯವಿಟ್ಠಲನ್ನ ಮನದಣಿಯ ನೀಕ್ಷಿಸುವಾಲೋಚನಿಯ ಮಾಡು ಬಿಡದೆ || 1 || ಮಟ್ಟತಾಳ ಹಿರಿಯ ನಾಡಿಯಿಂದ ಮರುತನ ಮೆಲ್ಲನೆ ಶಿರಸ ಪರಿಯಂತರ ತರಲುಪಾಯವನ್ನು ಅರಿದು ಎರಡು ಎಂಟು ಪರಿಮಿತವಾದ ಮಾ - ತುರ ತನಕ ರೇಚಕ ಆ ತರುವಾಯದಲಿ ಮೂವ - ತ್ತೆರಡು ಮಾತುರ ತನಕ ವರಪೂರ…