Haridasa Sahitya — Vyasadasa

Mantra Mahatma Sulaadi 1 — Gurumantra sulaadhi

ಸುಳಾದಿ ೧ — ಗುರುಮಂತ್ರ ಸುಳಾದಿ

Composer: Vijaya Dasaru · Deity: Vishnu / Vitthala · Genre: Sulaadi

Kannada lyrics

ಗುರುಮಂತ್ರ ಸುಳಾದಿ ರಾಗ ಸಾವೇರಿ ಧ್ರುವತಾಳ ಬಲವಾರು ಎನಗೆ ಪ್ರಬಲವಾಯಿತು ಕಲಿ ಬಲ ಹೆಚ್ಚಿ ಬಿಡದೆ ದುಂಬಲ ಬಿದ್ದಿದೆ ಬಲದಲ್ಲಿ ಉಳ್ಳ ಸುರರು ಬಲರು ನಿರ್ಬಲರಾಗಿ ಬಲಗುಂದಿದಂತೆ ತೊಲಗಿ ನಿಂದಾರೆ ಬಲವಂತ ನೀನು ಅಬಲೆ ಬಾಲಕರಿಗೆ ಬೆಂ - ಬಲವಾಗಿ ಸಾಕಿದ ಸುಬಲಾನೆಂದು ಬಲಗೊಂಡು ನಿನ್ನ ಹಂಬಲವ ಮಾಡಿದೆ ನಂ - ಬಲು ಬಡವರಿಗೆ ಬಾಂಧವನೆ ದೇವ ಬಲು ದಯಾದಿಂದೆಡಬಲದಲ್ಲಿ ಕಾಪಾಡು ಬಲದೇವಾನನುಜಾ ಬಲಾರಾತಿ ದಾತ ಬಲಿ ಭಂಜನೇಶ್ವರ ವಿಜಯವಿಠಲ ಬಲು ದೀನ ನಾನು ತೊಂಬಲಿಗೆ ಬಪ್ಪಂತಿರಲೀ || 1 || ಮಟ್ಟತಾಳ ಕರಿಯ ರೂಪದ ಪಾಪಿ ಅರುಣ ನಯನ ಐ - ದರಿಯಿಂದ ಉದುಭವಿಸಿ ಪರಿ ಪರಿಯ ಉಪ - ದುರಿತಾಂಗ ರೋಮ ಕರವಾಳ ಹಲಿಗೆ ಕರದಲ್ಲಿ ಪಿಡಿದು ಶಿರ ಕೆಳಗಾ…