Haridasa Sahitya — Vyasadasa
Mangalacharana Sulaadi 9 — Muktara prakaran sulaadhi
ಸುಳಾದಿ ೯ — ಮುಕ್ತರ ಪ್ರಕರಣ ಸುಳಾದಿ
Composer: Vijaya Dasaru · Deity: Vishnu / Vitthala · Genre: Sulaadi
Kannada lyrics
ಮುಕ್ತರ ಪ್ರಕರಣ ಸುಳಾದಿ ರಾಗ ಆನಂದಭೈರವಿ ಧ್ರುವತಾಳ ಮುಕುತಿಯಾದವರ ಪ್ರಕರಣವ ತಿಳಿಯಬೇಕು ಭಕುತಿಯಿಂದಲಿ ಭಾವ ಶುದ್ಧನಾಗಿ ಮುಕುತರೊಳಗೆ ತಾರತಮ್ಯವೇ ವುಂಟು ಆ - ಸಕುತರಾಗಿಪ್ಪರು ಹರಿ ಪದದಿ ಕಕುಲಾತಿ ಮೊದಲಾದ ದೋಷ ರೂಪಗಳಿಲ್ಲ ಅಕಟಕಟ ಯಿವರೀಗ ವಿಲಿಂಗರು ಸಕಲರೊಳಗೆ ಬ್ರಹ್ಮ ಉತ್ತಮ ದೇವತಿ ಅಕಳಂಕನಯ್ಯ ಸಂಸಾರದಲ್ಲಿ ಪ್ರಕಟ ಜ್ಞಾನವೇ ಸರಿ ವ್ಯಕ್ತವಾಗುವದು ಬಾ - ಧಕವಿಲ್ಲ ಋಜುಗಣಸ್ಥ ಜನರಿಗೆ ಮುಕುತಿಲಿ ಈಶಾದನ್ಯತ್ರ ಜಗದ್ವಿಷಯ ಜ್ಞಾನ ಶಕಲಯಿಲ್ಲದೆ ಅನಾಲೋಚನೆಯಲ್ಲಿ ಲಕುಮಿಗೆ ಸಾಮ್ಯ ಬಂತು ಎನದೀರಿ ಸದಾವಕ್ಕು ಉಕುತಿಯ ಲಾಲಿಸುವದು ಬೊಮ್ಮಗಿಂದಲಿ ಶ್ರೀ - ಲಕುಮಿಯ ಜ್ಞಾನ ಈಶ ಸರ್ವ ಪದಾರ್ಥದಲ್ಲಿ - ಧಿಕವಾಗಿಪ್ಪದು ಈಶಕೋಟಿ…