Haridasa Sahitya — Vyasadasa
Mangalacharana Sulaadi 8 — Haridasa lakshana sulaadhi
ಸುಳಾದಿ ೮ — ಹರಿದಾಸ ಲಕ್ಷಣ ಸುಳಾದಿ
Composer: Vijaya Dasaru · Deity: Vishnu / Vitthala · Genre: Sulaadi
Kannada lyrics
ಹರಿದಾಸ ಲಕ್ಷಣ ಸುಳಾದಿ ರಾಗ ಕಾಂಬೋಧಿ ಧ್ರುವತಾಳ ಮನವೆ ಲಾಲಿಸಿ ಕೇಳು ಬಿನ್ನೈಸುವೆನೊ ನಿನಗೆ ಚಿನುಮಯ ಮೂರ್ತಿಯ ಗುಣನಾಮ ಕೀ - ರ್ತನೆ ಮಾಳ್ವ ಬಗೆಯು ನಿನಗೆ ತಿಳಿಪುವೆನೋ ಘನವಾದ ಸುಸಾಧನವೆಂದು ತಿಳಿದು ತ್ರಿಕರ್ಣಪೂರ್ವಕವಾಗಿ ಘನಮಹಿಮ ನಾರಾಯಣನ ಅಚಿಂತ್ಯಾದ್ಭುತ ಶಕ್ತಿ ಅನುಭವಕೆ ತಂದುಕೊಂಡು ಸುಖಿಸುವದೂ ಮನವೆ ಮೊದಲಾದ ಸರ್ವ ಇಂದ್ರಿಯಂಗಾಳ - ವನ ಪಾದದಲ್ಲಿ ಇಟ್ಟು ಕೀರ್ತನೆ ಗೈಯೊ ನಿನಗಿದೆ ಮುಖ್ಯವಾದ ಗತಿ ಎಂದು ಸಾರಿದೇ ಅನುಮಾನ ಮಾಡಸಲ್ಲ ಎಂದೆಂದಿಗೇ ಬಿನಗು ದೈವಂಗಳ ಕಾಲಿಲೊದ್ದು ಮಧ್ವ - ಮುನಿ ಮತದಲ್ಲಿ ದೀಕ್ಷ ಬದ್ಧನಾಗೋ ಕುನರರ ನೆರಹಿಕೊಂಡು ಕುಚೇಷ್ಟೆ ಕಥೆಯ ಪೇಳಿ ಘನ ಅಂಧಂತಮಸಿನೊಳು ಬೀಳದಿರೂ ವನಜ ಭವಾಂಡದೊಳು ಹ…