Haridasa Sahitya — Vyasadasa

Mangalacharana Sulaadi 7 — Haridasa lakshana sulaadhi

ಸುಳಾದಿ ೭ — ಹರಿದಾಸ ಲಕ್ಷಣ ಸುಳಾದಿ

Composer: Vijaya Dasaru · Deity: Vishnu / Vitthala · Genre: Sulaadi

Kannada lyrics

ಹರಿದಾಸ ಲಕ್ಷಣ ಸುಳಾದಿ ರಾಗ ದರ್ಬಾರಿ ಕಾನಡ ಧ್ರುವತಾಳ ಹರಿದಾಸರ ಲಕ್ಷಣ ಇರಬೇಕು ಈ ಪರಿ ಗರುವ ಕೋಪ ಮದ ಮತ್ಸರಾದಿ ಬಿಡಬೇಕು ಮರುತ ಮತಕೆ ಎಲ್ಲಿ ಸರಿಗಾಣೆನೆನುತಲಿ ಧರಿಯೊಳು ಕೂಗಿ ಡಂಗುರವ ಹೊಯಲಿಬೇಕು ಎರಡಾರು ಪುಂಡ್ರವ ವಿರಿಚಿಸಿ ಪಂಚಮುದ್ರಾ - ಧರರಾಗಿ ತಪ್ತಾಂಕಿತ ಧರಿಸಬೇಕು ಭುಜದಲ್ಲಿ ಶಿರಿಬೊಮ್ಮ ಹರಾದ್ಯರಿಗೆ ತಾರತಮ್ಯ ಭಾವದಿಂದ ಎರಗಿ ಎನ್ನೊಳಗಿದ್ದು ಪೊರೆಯೆಂದಾಡಲಿಬೇಕು ಕರಣ ನಯನ ಶ್ರವಣ ಚರಣ ನಾಸ ವದನ ಪರಿಪರಿ ಅಂಗಗಳು ಹರಿವಿತ್ತವೆನ್ನಬೇಕು ಗುರುಹಿರಿಯರಿಗೆ ಆದರ ಪೂರ್ವಕದಿಂದ ಕರವ ಮುಗಿದು ನಮಸ್ಕರಿಸಿ ನುತಿಸಬೇಕು ನೆರೆಹೊರೆಯವರಿಗೆ ನಿರುತ ಇದ್ದರು ಬೇ - ಸರಗೊಳಿಸದೆ ಸಂಚರಿಸುತ್ತಲಿರಬೇಕು ಹರಣ ಹರಿಯಾಧೀನ ನೆ…