Haridasa Sahitya — Vyasadasa
Mangalacharana Sulaadi 6 — Guru mahatma sulaadhi
ಸುಳಾದಿ ೬ — ಗುರುಮಹಾತ್ಮ ಸುಳಾದಿ
Composer: Vijaya Dasaru · Deity: Vishnu / Vitthala · Genre: Sulaadi
Kannada lyrics
ಗುರುಮಹಾತ್ಮ ಸುಳಾದಿ ರಾಗ ಪೂರ್ವಿಕಲ್ಯಾಣಿ ಧ್ರುವತಾಳ ಗುರು ಭಕುತಿ ಪ್ರಧಾನ ಸಾಧನಾ ಗುರು ಶುಶೂಷವೆ ಮಹಾ ಕರ್ಮನಾಶನಾ ಗುರು ಉಪದೇಶವೆ ಜ್ಞಾನಮಾರ್ಗ ಗುರು ಪ್ರಸಾದ ಲಿಂಗಭಂಗಕ್ಕೆ ಕಾರಣ ಭಕುತಿ ಗುರು ಪರಮಾನುಗ್ರಹ ಮಾಡಿದಡಂ ನಿರುತ ಪಾರವಾರ ತತ್ವ ಪ್ರಮೇಯ ಕರತಳದೊಳಗಿದ್ದ ತೆರದಿಂ ಅರುಹುವಾಗುವದು ಮಾನವಂಗೆ ಸ್ವರೂಪ ಯೋಗ್ಯತಾದನಿತು ಗುರುಭಕುತಿ ಗುರುಬಲ ವಂದೇ ಇದ್ದಡಂ ಧರೆ ಎಲ್ಲ ಗೆಲ್ಲವಕ್ಕು ಆವಾಗ ಗುರು ಕರುಣ ಪಡದಡಂ ಧನ್ಯನೊ ಗುರುಧ್ಯಾನ ಮಾಳದು ಜನರು ಗುರು ಚರಣಾಬ್ದ ಶೃಂಗನಾಗೋ ಗುರುಗಳಿಗೆ ಸರಿಗಾಣೆನೊ ಗುರು ವೊಲಿದಡೆ ಸರ್ವ ವಿದ್ಯಾ ಪ್ರಾಪ್ತಿ ಗುರು ಮಂತ್ರ ಗುರೋರ್ಜಪ ಗುರುನಾಮ ಸ್ಮರಣೆ ಹಿರಿದಾಗಿ ಕೈಕೊಂಡು ಸುಖಿಸುವದು…