Haridasa Sahitya — Vyasadasa

Mangalacharana Sulaadi 5 — Guru mahatma sulaadhi

ಸುಳಾದಿ ೫ — ಗುರು ಮಹಾತ್ಮ ಸುಳಾದಿ

Composer: Vijaya Dasaru · Deity: Vishnu / Vitthala · Genre: Sulaadi

Kannada lyrics

ಗುರು ಮಹಾತ್ಮ ಸುಳಾದಿ ರಾಗ ಮುಖಾರಿ ಧ್ರುವತಾಳ ಗುರುಮಂತ್ರವನ್ನೆ ಮಾಡು ಗುಣವಂತನಾಗಿ ಮನುಜಾ ಗುರುತು ನಿನಗೆ ಪೇಳುವೆನು ಗುಪ್ತವಿಟ್ಟು ಗುರು - ಲಘು - ಪಾಪಂಗಳು ದಹಿಸಿ ಪೋಗೋವು ನಿತ್ಯ ಗುರುವೇ ಮುಖ್ಯನು ಕಾ ಸದ್ಗತಿಗೆ ಗುರುಭಕುತಿ ಬೇಕೊ ವೈದಿಕ ಲೌಕಿಕಕ್ಕೆ ಗುರು ಉಪದೇಶವಿಲ್ಲದೆ ವಿದ್ಯವಿಲ್ಲ ಗುರುವೆ ಜಗದ್ಗುರು ತಾನಾದ ಕಾಲಕ್ಕೆ ಭರತವರ್ಷದಲ್ಲಿ ಜನ್ಮ ಧರಿಸಿದಾಗ ನರ ಯಃಕಶ್ಚಿತನಾಗೆ ಅವನಿಂದ ಉಪದೇಶ ಗುರುಭಾವದಿಂದ ಕೊಂಡು ನಮಿಸಬೇಕು ಅರೆಮರೆ ಮಾಡಸಲ್ಲಾ ಸ್ವರೂಪೋತ್ತಮನಲ್ಲ ಹರಿ ಆಜ್ಞೆ ಅಂಥಾದ್ದೇ ಮೀರಲುಂಟೆ ಗುರುಮುಖದಿಂದ ವಿದ್ಯಾಪ್ರಾಪ್ತವಾಗುವದೆಂದು ವರಶ್ರುತಿತತಿಯಲ್ಲಿ ಪೇಳುತಿದಕೊ ಸುರನರೋರಗ ಲೋಕದಲ್ಲಿದ್ದ ಕಾಲಕ್ಕ…