Haridasa Sahitya — Vyasadasa
Mangalacharana Sulaadi 4 — Arohana guna taratamya sulaadhi
ಸುಳಾದಿ ೪ — ಆರೋಹಣ ಗುಣ ತಾರತಮ್ಯ ಸುಳಾದಿ
Composer: Vijaya Dasaru · Deity: Vishnu / Hari · Genre: Sulaadi
Kannada lyrics
ಆರೋಹಣ ಗುಣ ತಾರತಮ್ಯ ಸುಳಾದಿ ರಾಗ ಭೈರವಿ ಧ್ರುವತಾಳ ತಾರತಮ್ಯವೆ ಕೇಳಿ ನೀಚಕ್ರಮಾನುಸಾರ ಮೂರಾರು ಭಕುತಿ ಭೇದ ಜ್ಞಾನದಿಂದ ಮೂರು ಮೂರು ಮೂರು ವಿಧದೊಳು ನಿತ್ಯ ಸಂ- ಸಾರಿಗಳುಂಟು, ಸ್ವರ್ಗ ನಿರಯ ಭೂ ಪ್ರಾಚುರ್ಯರು ಧಾರುಣಿಯೊಳಗಿವರಿಗಭಿಧಾನವಿಲ್ಲಾ ವಿ ಸ್ತಾರ ರಾಜಸದವರು ಪ್ರಸಿದ್ಧಾ ಘೋರ ತಾಮಸಿಗಳಿಗೆ ತಾರತಮ್ಯವೆ ಉಂಟು ಬೀರುವೆ ಮತ್ತೊಂದು ಬರಹದಲ್ಲಿ ಸಾರುವೆ ತಿಳಿ ಸರ್ವಜೀವಿಗಳೊಳು ಅ- ಪಾರ ನೀಚನು ನೀಚತಮ ಕಲಿಯು ಸಾರುವೆ ಎಲ್ಲಿಂದಿತ್ತ ಮುಕ್ತಿಯೋಗ್ಯ ಜನರನ್ನು ಹಾರೈಸಿ ಮನೋವಾಚಾ ಕಾಯದಲ್ಲಿ ಬಾರಿ ಬಾರಿಗೆ ಇದನೆ ಪಠಿಸಿದವರಿಗೆ ವಿ- ಕಾರವಿಲ್ಲಾ ಕಾಣೋ ಇದ್ದ ಜ್ಞಾನ ವೈರಾಗ್ಯ ಪುಟ್ಟುವದು ಅಶೇಷವಾಗಿ, ತತ್ತ ದ್ವಾರದಿಂದಲಿ…