Haridasa Sahitya — Vyasadasa
Mangalacharana Sulaadi 3 — Sri Pranadevara hasta mahima sulaadhi
ಸುಳಾದಿ ೩ — ಶ್ರೀಪ್ರಾಣದೇವರ ಹಸ್ತ ಮಹಿಮಾ ಸುಳಾದಿ
Composer: Vijaya Dasaru · Deity: Hanuman / Rama · Genre: Sulaadi
Kannada lyrics
ಶ್ರೀಪ್ರಾಣದೇವರ ಹಸ್ತ ಮಹಿಮಾ ಸುಳಾದಿ ರಾಗ ಭೌಳಿ ಧ್ರುವತಾಳ (ಹನುಮದವತಾರ ಮಹಿಮೆ) ಕಡಗ ಕಂಕಣದಿಂದ ಶೋಭಿತವಾದ ಹಸ್ತಾ ಪೊಡವಿಪತಿ ರಘುನಾಥಗೆ ಎರಗಿ ಮುಗಿದ ಹಸ್ತಾ ಒಡನೆ ಕುರುಹುಗೊಂಡು ಸೀತೆಗಿತ್ತ ಹಸ್ತಾ ಗಿಡಗಳ ಮುರಿದು ತರಿದಂಥದೀ ಹಸ್ತಾ ಘುಡಿಘುಡಿಸುತ ಅಕ್ಷನ ಸದೆಬಡೆದ ಹಸ್ತಾ ಜಡ ರಾವಣನ ಎದೆಯಲ್ಲಿ ಗುದ್ದಿದ ಹಸ್ತಾ ತಡೆಯದೆ ಚೂಡಾಮಣಿಯ ಒಡೆಯಗಿತ್ತ ಹಸ್ತಾ ಕಡು ಪರಾಕ್ರಮದ ಹಸ್ತಾ ಕಡಲ ಬಂಧಿಸಲು ಗಿರಿಗಳ ತಂದ ಹಸ್ತಾ ಬಿಡದೆ ಪೂಜಿಪರಿಗೆ ಅಭಯ ಕೊಡುವ ಹಸ್ತಾ ಸಡಗರದ ದೈವ ಸಿರಿ ವಿಜಯವಿಠಲ ರಾಮನ ಅಡಿಗಳಲ್ಲಿ ಅನುಗಾಲ ಇಟ್ಟ ಹಸ್ತಾ || 1 || ಮಟ್ಟತಾಳ (ಭೀಮಾವತಾರ ಮಹಿಮೆ) ಗದೆಯಿಂದ ಅರಿಗಳ ಸದೆ ಬಡೀದ ಹಸ್ತಾ ಮುದದಿಂದಲಿ ಅದ್…