Haridasa Sahitya — Vyasadasa

Mangalacharana Sulaadi 1 — Nadi taratamya sulaadhi

ಸುಳಾದಿ ೧ — ನದಿ ತಾರತಮ್ಯ ಸುಳಾದಿ

Composer: Vijaya Dasaru · Deity: Vishnu / Hari · Genre: Sulaadi

Kannada lyrics

ನದಿ ತಾರತಮ್ಯ ಸುಳಾದಿ ನದಿ ತಾರತಮ್ಯವನ್ನು ತಿಳಿದು ಪ್ರತಿ ಉದಕದಲ್ಲಿ 24 ತತ್ವಗಳು ,ತತ್ವಾಭಿಮಾನಿ ದೇವತೆಗಳು ಮತ್ತು ಬ್ರಹ್ಮ -ಸರಸ್ವತಿದೇವಿಯರ ಸಂಗಡ, ರಮಾ ಸಹಿತ ನಾರಾಯಣನ ವ್ಯಾಪ್ತಿ ದ್ರವರೂಪವಾಗಿಯೂ ತದಾಕಾರವಾಗಿಯೂ ತಚ್ಛಬ್ಧ ವಾಚ್ಯವಾಗಿಯೂ ಇರುವುದು ಮತ್ತು ಉದಕದಲ್ಲಿ ನಾನಾ ಕ್ರೀಡೆಯಾಡುವರು , ನಾನಾ ಜಲದಲ್ಲಿ ಕಾಲನಾಮಕ ಭಗವಂತನನ್ನು ಸ್ಮರಿಸಬೇಕು. ೧) ಸುರಗಂಗೆ - ಗಂಗಾ ನದಿಯಲ್ಲಿ ಶಂಖ ಚಕ್ರ ಗಧಾ ಪದುಮಯುಕ್ತ ಮಾಧವ. ೨) ಕುಶಾವತಿ- ಶಂಖಾರಿಗಧಾ ಪದುಮನಾರಾಯಣ ೩) ಕೃಷ್ಣವೇಣಿ - ಯಲ್ಲಿ ಶಂಖ ಚಕ್ರ ಚರಮ ಶಾರ್ಙಧರ ಕೃಷ್ಣಾ ೪) ಯಮುನೆ - ಯಲ್ಲಿ ದಂಡ ಶಂಖ ಶರ ಶಾರಂಗಛಾಪ ಹರಿಕೃಷ್ಣ ೫) ಸರಸ್ವತಿ- ಯಲ್ಲಿ ದ್ವಿಭುಜ ಪದುಮ…