Haridasa Sahitya — Vyasadasa

Bhojanavidhi sulaadhi

ಭೋಜನವಿಧಿ ಸುಳಾದಿ

Composer: Vijaya Dasaru · Deity: Hari · Genre: Sulaadi

Kannada lyrics

ಭೋಜನವಿಧಿ ಸುಳಾದಿ ಕರ್ಮದ ಮರ್ಮವನ್ನರಿತು ಹರಿಗೆ ಸಮರ್ಪಿಸುತ್ತ, ಆತ್ಮಯಜ್ಞ ರೂಪವಾದ ಪ್ರಾಣಾಗ್ನಿಹೋತ್ರವನ್ನು ಮಾಡು. ಶುದ್ಧಾನ್ನ ಭೋಜನವನ್ನು ವಿಚಾರಪೂರ್ವಕ ಭುಂಜಿಸಿದರೆ, ಸದ್ಭುದ್ಧಿದ್ವಾರಾ ಜ್ಞಾನ ಭಕ್ತಿ ವಿರಕ್ತಿ ಮುಕುತಿ ದೊರೆಯುವುದು. ರಾಗ ತೋಡಿ ಧ್ರುವತಾಳ ನಿತ್ಯ ಸಂತೃಪ್ತ ಸರ್ವಸಾರಭೋಕ್ತ ಪುರುಷೋತ್ತಮ ಅಚಿಂತ್ಯಮಹಿಮ ಭಕ್ತವತ್ಸಲ ಸತ್ಯಸಂಕಲ್ಪ ಹರಿಗೆ ನಾನಾ ಉಪಚಾರದಿಂದ ಭಕ್ತಿ ವೆಗ್ಗಳನಾಗಿ ಮಜ್ಜನಾದಿಯ ಮಾಡಿ ಚಿತ್ತ ನಿರ್ಮಳದಿಂದ ನಾನಾ ಸೌಖ್ಯವಾಗಿದ್ದ ಉತ್ತಮ ಪದಾರ್ಥ ಸುಪಕ್ವ ಗೈಸಿ ಆತ್ಮನ ಮುಂಭಾಗದಲ್ಲಿ ಇಡಿಸಿ ಸ್ತೋತ್ರಗಳಿಂದ ತುತ್ತು ಸಮರ್ಪಿಸಿ ಧ್ಯಾನ ಮಾಡಿ ತೆತ್ತಿಗೆ ನಾನೆಂದು ಅಡಿಗಡಿಗೆ ಹಿಗ್ಗಿ ತನ್ನ…