Haridasa Sahitya — Vyasadasa
Annadanada sulaadhi
ಅನ್ನದಾನದ ಸುಳಾದಿ
Composer: Vijaya Dasaru · Deity: Hari · Genre: Sulaadi
Kannada lyrics
ಅನ್ನದಾನದ ಸುಳಾದಿ ಅತಿಥಿ ಅಭ್ಯಾಗತ ಪೂಜಾ, ಉತ್ತಮರಿಗೆ ಅನ್ನದಾನ ಮಾಡುವುದು ರಾಗ ರೀತಿಗೌಳ ಧ್ರುವತಾಳ ಉತ್ತಮರಿಗೆ ಒಂದು ತುತ್ತನ್ನ ದಾನದಿಂದ ಇತ್ತವನ ಕುಲ ಹತ್ತು ಹತ್ತು ಒಂದು ಸಪುತ ಗೋತ್ರಾಖಿಳ ಹತ್ತಿ ಹೊಂದಿದವರು ಸುತ್ತಣ ಪರಿವಾರ ಎತ್ತಲೆತ್ತ ಉಳ್ಳವರು ಅತ್ಯಂತವಾದ ಪಾಪ ಮೊತ್ತದಾಸಕ್ತರಾಗಿ ಮೃತ್ಯುಲೋಕದಲ್ಲಿ ಆಪತ್ತು ಬಡುತಲಿರೆ ಹೆತ್ತ ಜನನಿಯಂತೆ ಎತ್ತಿ ಕೊಂಡೊಯ್ದು ಪುನರಾವರ್ತಿ ಇಲ್ಲದ ಲೋಕದತ್ತ ಸೇರಿಸುವದು ಎತ್ತಲು ಸರಿಗಾಣೆ ಕ್ಷುಧಾತುರ್ಯರಾಗಿ ಬಂದ ಸೋತ್ತಮರಿಗಿತ್ತ ಫಲ ಚಿತ್ತದಲ್ಲಿ ಎಣಿಸೆ ಹತ್ತಾವತಾರ ಸಿರಿ ವಿಜಯವಿಟ್ಠಲರೇಯನ ನಿತ್ಯ ಕರುಣ ಪಡೆದು ಸತ್ಯದಲ್ಲಿ ನಡೆದಾ ॥ ೧ ॥ ಮಟ್ಟತಾಳ ಹರಿ ಸರ್ವೋತ್ತಮವೆಂಬೊ ಜ…