Haridasa Sahitya — Vyasadasa
Vijaya dasara bhajane maadiro
ವಿಜಯದಾಸರ ಭಜನೆ ಮಾಡಿರೊ |
Composer: Mohana Dasaru · Deity: Vijaya Dasaru · Genre: Bhakti
Kannada lyrics
ವಿಜಯದಾಸರ ಭಜನೆ ಮಾಡಿರೊ | ವಿಜಯದಾಸರ ಭಜನೆ ಮಾಡಲುಅಜನ ಜನಕ ನಿಜನಿಗೊಲಿದುಕುಜನ ಸಂಗತಿ ತ್ಯಜನ ಮಾಡಿಸಿಸುಜನರ ಪಾದಾಂಬುಜದಲ್ಲಿಡುವ ||pa|| ಶುದ್ಧ ಮಂದರನ್ನ ಉದ್ಧಾರಾರ್ಥವಾಗಿಮಧ್ವರಾಯರ ಮತಾಬ್ಧಿಯೊಳು ಪುಟ್ಟಿಸಿದ್ಧಾಂತ ಸ್ಥಾಪಿಸಿ ಗೆದ್ದು ವಾದಿಗಳಹೆದ್ದೈವವೇ ಅನಿರುದ್ಧನು ಯೆಂದು || ಪದ್ಧತಿಂದ ಪೇಳಿಸಿದಿ ವೈಷ್ಣವರನ್ನಶುದ್ಧಾತ್ಮರ ಮಾಳ್ಪ ಉದ್ಯೋಗದಿಂದಲಿಹದ್ದನ್ನೇರಿ ಬಪ್ಪ ಪದ್ದುಮನಾಭನ್ನಹೃದ್ದಯದೊಳಗಿಟ್ಟ ಸದ್ಗುರುರಾಯ ||1|| ಭೂಸುರಾಬ್ಧಿಗೆ ತಾರೇಶನಂತೊಪ್ಪುವಸಾಸಿರ ನಾಮದ ಶೇಷಗಿರಿ ಶ್ರೀ ನಿ-ವಾಸನ ಯಾತ್ರೆಯ ಲೇಸಾಗಿ ಮಾಡ್ಯೆತಿ ಸ- |ಹಾಸ ಸಂತೋಷದಿಂದಲೆ || ವಾಸುದೇವನ ಮಾನಸದೊಳಿಟ್ಟು ದು-ರಾಶೆಯ ತೊರೆದು ಕ್ಲೇಶವ ಪಡ…
Transliteration
vijayadAsara Bajane mADiro | vijayadAsara Bajane mADalu^^ajana janaka nijanigolidukujana sangati tyajana mADisisujanara pAdAMbujadalliDuva ||pa|| Suddha mandaranna uddhArArthavAgimadhvarAyara matAbdhiyoLu puTTisiddhAMta sthApisi geddu vAdigaLaheddaivavE aniruddhanu yendu || paddhatinda pELisidi vaiShNavarannaSuddhAtmara mALpa udyOgadindalihaddannEri bappa paddumanABannahRuddayadoLagiTTa sadgururAy…