Haridasa Sahitya — Vyasadasa

Venkatachalanilaya enna odeya |

ವೆಂಕಟಾಚಲನಿಲಯಾ ಎನ್ನ ಒಡೆಯ

Composer: Vijaya Dasaru · Deity: Srinivasa / Venkatesha · Genre: Bhakti

Kannada lyrics

ವೆಂಕಟಾಚಲನಿಲಯಾ ಎನ್ನ ಒಡೆಯ ||pa|| ವೆಂಕಟಾಚಲನಿಲಯಾ ವಿಧಾತೃಸಂತರೊಡೆಯಾ | ಪಂಕಜಮುಖಿ ರಮಣ ಪಾವನಚರಣಾ||a.pa|| ಉದಯವಾಗದ ಮುನ್ನ ಉದರ ಪೋಷಣೆ ಚಿಂತೆ | ಅದರ ಮೇಲೆ ಧಾನ್ಯ ಧನದ ಚಿಂತೆ || ಮದನ ಯೌವನದ ಚಿಂತೆ ಮತ್ತೆ ಸತ್ವದ ಚಿಂತೆ | ಹೃದಯದಲಿ ನಿಮ್ಮ ಚಿಂತೆಯನು ಮಾಡದಲೆ ಕೆಟ್ಟೆ||1|| ಮಂದಗಮನೆಯರಾಶೆ ಮೇದಿನಿ ಆಳುವ ಆಶೆ | ನಂದನರ ಆಶೆ ನಾನಾ ಆಶೆಯು || ಬಂಧುಬಳಗದ ಆಶೆ ಭಾಗ್ಯವುಳ್ಳವನಾಶೆ | ಒಂದು ದಿನ ನಿಮ್ಮಾಶೆಯನು ಮಾಡದಲೆ ಕೆಟ್ಟಿ ||2|| ಎದುರುಯಿಲ್ಲವೆಂಬೊ ಗರ್ವ ಎದೆಯ ಬಿಗುವಿನ ಗರ್ವ | ವದನನಿಷ್ಠುರ ಗರ್ವ ವಿದ್ಯ ಗರ್ವವು || ಉದಧಿಶಯನ ನಮ್ಮ ವಿಜಯವಿಠ್ಠಲರೇಯಾ | ಮದ ಗರ್ವದಿಂದ ನಿನ್ನ ನೆನಹು ಮಾಡದೆ ಕೆಟ್ಟೆ||3…

Transliteration

Venkatachalanilaya enna odeya | Venkatachalanilaya vidhatru santarodiya | Pankajamuki ramana pavanacarana | pa | Udayavagada munne udara poshana chinte | Adara mele dhanyadhanada chinte | Madana yauvvanada chinte mattasatvada cimte | Hrudayadali nimma chinteyanu madadele katte | 1 | Mandagamaneyarase medini aluva ase | Nandanara ase nana aseyu | Bandhu balagada ase bagyavullavarase | Ondu dina nim…