Haridasa Sahitya — Vyasadasa

Veni madhavana torise jane triveni

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ

Composer: Vijaya Dasaru · Deity: Lakshmi Devi · Genre: Bhakti

Kannada lyrics

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ ಕಾಣದೆ ನಿಲ್ಲಲಾರೆನೆ ||pa|| ಕಾಣುತ ಭಕುತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಕಲ್ಯಾಣಿ ಸುಸನ್ನುತೆ ||a.pa|| ಬಂದೆನೆ ಬಹಳ ದೂರದಿ ಭವಸಾಗರ ತರಣಿ ನಿಂದೆನೆ ನಿನ್ನ ತೀರದಿ ಒಂದು ಘಳಿಗೆ ನೀ ಹರಿಯ ಬಿಟ್ಟಿರಲಾರಿ ಮಂದಗಮನೆ ಎನ್ನ ಮುಂದಕ್ಕೆ ಕರೆಯೆ ||1|| ಶರಣಾಗತರನು ಪೊರೆವುದು ಇದು ನಿನ್ನ ಬಿರುದು ಕರುಣವಿಂದೆನ್ನ ಕರೆವುದು ಸ್ಮರಣೆ ಮಾತ್ರದಿ ಭವ ತಾಪವ ಹರಿಸುವ ಸ್ಮರನಪಿತನ ಮುರಹರನ ಕರುಣದಿ ||2|| ಸುಜನರಿಗೆಲ್ಲ ದಾತಳೆ ಸುಶೀಲೆ ಕೇಳೆ ಕುಜನರ ಸಂಗದೂರಳೆ ನಿಜ ಪದವಿಯನಿತ್ತು ಸಲಹುವ ನಮ್ಮ ವಿಜಯವಿಠ್ಠಲ ನಿಜಪದ ತೋರಿಸೆ ||3|| Veni madhavana torise jane triveni Kanade ni…

Transliteration

Kanuta Bakutara karunadi salahuva Jane triveni kalyani susannute ||a.pa|| Bandene bahala duradi bavasagara tarani Nindene ninna tiradi Ondu galige ni hariya bittiralari Mandagamane enna mundakke kareye ||1|| Saranagataranu porevudu idu ninna birudu Karunavindenna karevudu Smarane matradi Bava tapava harisuva Smaranapitana muraharana karunadi ||2|| Sujanarigella datale susile kele Kujanara sangadur…