Haridasa Sahitya — Vyasadasa

Vedavyasara divya padava padumayugala

ವೇದವ್ಯಾಸರ ದಿವ್ಯಪಾದ ಪದುಮಯುಗಲ

Composer: Haridasa · Deity: Vedavyasa · Genre: Dasara Pada

Kannada lyrics

ವೇದವ್ಯಾಸರ ದಿವ್ಯಪಾದ ಪದುಮಯುಗಲ ಆರಾಧಿಸುತಿರು ಮನುಜಾ ||pa|| ವೇದಗಳಿಗೆ ಸಮ್ಮತವಾದ ಪುರಾಣಗಳ ಸಾದರದಲಿ ರಚಿಸಿ ಮೋದವ ಬೀರಿದ ||a.pa|| ಧರಿಯೊಳು ಸುಜನರಿಗೆ ವರಧರ್ಮ ತಿಳಿಸೆಂದು ಸುರಮುನಿ ಪ್ರಾರ್ಥನದಿ ಪರಮ ಮಂಗಲ ವೀರವರ ಭಾಗವತ ಗ್ರಂಥ ವಿರಚಿಸಿ ಶುಕಮುನಿಗೆ ಕರುಣದಿಂದರುಹಿದ ||1|| ವಾಸಿಪ ಮುನಿಗುಣ ಭೂಷಿತ ಬದರಿಯೋಳ್ ತೋಷ ತೀರ್ಥರ ಕರೆದು ಭೂಸುರ ಜನರಿಗೆ ಮೋಕ್ಷದಾಯಕ ಸೂತ್ರ ಭಾಷ್ಯವರಚಿಸೆಂದಾದೇಶವ ನೀಡಿದ||2|| ಅರಿದರಾದ್ಯಯುಧ ಧರಿಸಿ ಷೋಡಶಸಂಖ್ಯ ಕರಗಳಿಂದಲಿ ಶೋಭಿತ ಶರಣು ಜನಕೆ ಸುರತರು ವೆನಿಸಿ ಧರೆಯೊಳು ಮೆರೆವ ಕಾರ್ಪರ ನರಹರಿ ರೂಪಾತ್ಮಕನಾದ ||3||

Transliteration

vEdavyAsara divyapAda padumayugala ArAdhisutiru manujA ||pa|| vEdagaLige sammatavAda purANagaLa sAdaradali racisi mOdava bIrida ||a.pa|| dhariyoLu sujanarige varadharma tiLisendu suramuni prArthanadi parama mangala vIravara BAgavata grantha viracisi Sukamunige karuNadindaruhida ||1|| vAsipa muniguNa BUShita badariyOL tOSha tIrthara karedu BUsura janarige mOkShadAyaka sUtra BAShyavaracisendAdESava…