Haridasa Sahitya — Vyasadasa

Vedavyasa suladhi

ಧ್ರುವತಾಳ

Composer: Vijaya Dasaru · Deity: Vedavyasa · Genre: Sulaadi

Kannada lyrics

ಧ್ರುವತಾಳ ಯತಿಗಳ ಶಿರೋರತುನಾ ಸತಿಯ ಅವಿಯೋಗಿ ರತಿಪತಿ ಜನಕಾ ಸ್ವರತ ಸ್ವಪ್ರಕಾಶಿತ ಅತಿತಾದ್ಭುತ ಮಹಿಮ ಪತಿತ ಪಾವನನಾಮಾ ನತಜನ ಸುರಧೇನು ದಿತಿಜತಿಮಿರಭಾನು ಅತಿ ದೂರ ದೂರಸಂತತ ದಯಾಪರ ಚತುರ ನಾನಾ ಸುರತತಿ ಕರಕಮಲಾ- ರ್ಚಿತಪಾದ ಸುಂದರ ದೀನ ಮಂದಾರ ಪ್ರತರ್ದನನಾಮ ನಮ್ಮ ವಿಜಯವಿಠ್ಠಲ ಸತ್ಯ- ವತಿಸೂನು ಜಗದೊಳು ಪ್ರತಿಯಿಲ್ಲದ ದಾತಾ || ೧ || ಮಟ್ಟತಾಳ ಜ್ಞಾನಮಯಾಕಾರ ಜ್ಞಾನಮಯಾನಂದಾ ಜ್ಞಾನಮಯೈಶ್ವರ್ಯ ಜ್ಞಾನಮಯವರ್ನ ಜ್ಞಾನಮಯ ತೇಜಾ ಜ್ಞಾನಮಯ ಶಕ್ತಿ ಜ್ಞಾನ ಮಯಾಂಬುಧಿ ಜ್ಞಾನವಿಲೋಲ ನಾ- ಮಾನಿ ವಿಜಯ ವಿಠ್ಠಲನೆ ನಿನಗೆ ಸಮಾ ಮೌನಿ ವ್ರತ ಧೃತನೆ ಜ್ಞಾನ ಸುಖ ಸಾಂದ್ರಾ || ೨ || ತ್ರಿವಿಡಿತಾಳ ಕಲಿಯ ವ್ಯಾಪಾರ ವೆಗ್ಗಳವಾಗಿ ವ್ಯಾ…

Transliteration

-dhruva tala – Yatigala siroratuna satiya aviyogi Ratipati janaka svarata svaprakasita Atitadbuta mahima patita pavananama Natajana suradhenu ditijatimirabanu Ati dura durasantata dayapara Chatura nana suratati karakamalarcitapada Sundara dina mandara Pratardananama namma vijayaviththala Satyavatisunu jagadolu pratiyillada data || 1 || -matta tala – J~janamayakara j~janamayananda J~janamayaisvarya…