Haridasa Sahitya — Vyasadasa

Vedava tandu vidhi

ವೇದವ ತಂದು ವಿಧಿಗೀವಂದೆ

Composer: Vadirajaru · Deity: Vishnu · Genre: Dasara Pada

Kannada lyrics

ವೇದವ ತಂದು ವಿಧಿಗೀವಂದೆ ನೀಸಾಧು ಜನರ ಸಲಹಲಿ ಬಂದೆ ||pa|| ಮೋದದಿಂದೆಮ್ಮ ಮನದಿ ನಿಂದೆ ನೀಬಾಧಿಪ ದುರಿತತತಿಯ ಕೊಂದೆ||a.pa|| ಸಕಲ ಸುರರಿಗೆ ಶಿರೋರನ್ನ ನೀಅಕಳಂಕಾಶ್ರಿತಜನಮಾನ್ಯ ನಿಖಿಲ ನಿಗಮನಿಕರದಿ ವಣ್ರ್ಯ ನಿನ್ನಕರುಣಾಕಟಾಕ್ಷದಿ ನೋಡೆನ್ನ ||1|| ಕೈವಲ್ಯಪದವಿಯ ಕೊಡಬಲ್ಲ ನಿನ್ನಸೇವಿಪ ಸುಜನರಿಗೆಣೆಯಿಲ್ಲ ಭಾವಜಕೋಟಿಯಿಂದಚೆಲ್ವ ನೀಶ್ರೀವನಿತೆಗೆ ಸಿಲುಕುವನಲ್ಲ ||2|| ಹಯವದನ ಹೃದಯಸದನಜಯ ಶಶಿವರ್ಣ ಜಗತಿಪೂರ್ಣ ಭಯಹರ ಭಾಸುರ ಸಿರಿಚರಣ ನಿನ್ನದಯಪಾತ್ರಾನುದ್ಧರಿಸೆನ್ನ ||3||

Transliteration

vedava tandu vidhigivande | ni | Sadhu janara salahali bande || pa || Modadindemma manadi ninde ni | Badhipa duritatiya konde | |a.pa. || Sakala surarige siroranna ni | Akalankasrita janamanya | Nikila nigama nikaradi varnya ninna | Karuna katakshadi nodenna || 1 || Kaivalya padaviya kodaballa ninna | Sevipa janarigeneyilla | Bavajakotiyindati celva ni | Sri vanitege silukuvanalla | |2 || Hayavada…