Haridasa Sahitya — Vyasadasa
Vatanna jayajatanna loka
ವಾತನ್ನ ಜಯಾಜಾತನ್ನ ಲೋಕ-
Composer: Vijaya Dasaru · Deity: Mukhyaprana / Vaayu / Hanuma / Bheema · Genre: Bhakti
Kannada lyrics
ವಾತನ್ನ ಜಯಾಜಾತನ್ನ ಲೋಕ- ಪ್ರೀತನ್ನ ಸ್ತುತಿಸಿ ಖ್ಯಾತನ್ನ ||pa|| ವಿಷವ ನುಂಗಿದ ಮಹಾಶೌರ್ಯನ್ನ ನಿತ್ಯ ಅಸಮ ಸುಂದರ ಮತಿಧಾರ್ಯನ್ನ ನಿಶಾಚರ ಕುಲದೋಷ ಸೂರ್ಯನ್ನ ಆರಾ ಧಿಸುವ ಭಕ್ತರ ಸುಕಾರ್ಯನ್ನ ||1|| ವಾನರ ಕುಲದೊಳು ಧೈರ್ಯನ್ನ ಮುದ್ದು ಆನನ ಗೀರ್ವಾಣವರ್ಯನ್ನ ಆನಂದ ವಿಜ್ಞಾನ ಚರ್ಯನ್ನ ದುಷ್ಟ – ದಾನವರಳಿದತಿ ವೀರ್ಯನ್ನ ||2|| ದ್ವಿಜರಾಜ ಕುಲಾಗ್ರಣಿ ಭೀಮನ್ನ ಮಹ ದ್ವಿಜಕೇತ ನಂಘ್ರಿಗೆ ಪ್ರೇಮನ್ನ ದ್ವಿಜರ ಪಾಲಿಸಿದ ನಿಸ್ಸೀಮನ್ನ ಕುರು ವ್ರಜವ ಸದೆದ ಸಾರ್ವಭೌಮನ್ನ ||3|| ಅದ್ವೈತ ಮತ ಕೋಲಾಹ ಲನ್ನ ವೇದ ಸಿದ್ಧಾಂತ ಶುಭಗುಣ ಶೀಲನ್ನ ಸದ್ವೈಷ್ಣವರನ್ನು ಪಾಲನ್ನ ಗುರು ಮಧ್ವಮುನಿ ಗುಣಲೋಲನ್ನ ||4|| ಚಾರುಚರಿತ ನಿರ್ದೋಷನ…
Transliteration
Vishava nungida mahasauryanna nitya Asama sundara matidharyanna Nisacara kuladosha suryanna ara Dhisuva baktara sukaryanna ||1|| Vanara kuladolu dhairyanna muddu Anana girvanavaryanna Ananda vignana caryanna dushta – Danavaralidati viryanna ||2|| Dvijaraja kulagrani bimanna maha Dvijaketa nangrige premanna Dvijara palisida nissimanna kuru Vrajava sadeda sarvabaumanna ||3|| Advaita mata kolaha lann…