Haridasa Sahitya — Vyasadasa
Varava kodu enage vagdevi ninna
ವರವ ಕೊಡು ಎನಗೆ ವಾಗ್ದೇವಿ ನಿನ್ನ
Composer: Kanakadasaru · Deity: Saraswati Devi · Genre: Bhakti
Kannada lyrics
ವರವ ಕೊಡು ಎನಗೆ ವಾಗ್ದೇವಿ ನಿನ್ನ ಚರಣಕಮಲಂಗಳನ ದಯಮಾಡು ದೇವಿ ||ಪ|| ಶಶಿ ಮುಖದ ನಸುನಗೆಯ ಬಾಲೆ ಎಸೆವ ಕರ್ಣದ ಮುತ್ತಿನೋಲೆ ನಸುನಗುವ ಸುಲಿಪಲ್ಲ ಗುಣಶೀಲೆ ದೇವಿ ಬಿಸಜಾಕ್ಷಿ ಎನ್ನ ಹೃದಯದೊಳು ನಿಂದು ||೧|| ಇಂಪು ಸೊಂಪಿನ ಚಂದ್ರಬಿಂಬೆ ಕೆಂಪು ತುಟಿಗಳ ನಾಸಿಕದ ರಂಭೆ ಜೋಂಪು ಮದನನ ಪೂರ್ಣಶಕ್ತಿ ಗೊಂಬೆ ಒಳ್ಳೆ ಸಂಪಿಗೆಯ ಮುಡಿಗಿಟ್ಟು ರಾಜಿಪ ಶಾರದಾಂಬೆ ||೨|| ರವಿಕೋಟಿ ತೇಜಪ್ರಕಾಶೇ ಮಹಾ ಕವಿಜನರ ಹ್ರಿತ್ಕಮಲ ವಾಸೇ ಅವಿರಳಪುರಿಯ ಸಿರಿಕಾಗಿನೆಲೆಯಾದಿ ಕೇ ಶವನ ಸುತನಿಗೆ ಸನ್ನುತ ರಾಣಿವಾಸೆ ||೩||
Transliteration
Varava kodu enage vagdevi ninna Charana kamalangala dayamadu devi || pallavi || Sasi mukada nasu nageya bale Eseva karnada muttina Ole Nasuva supalla gunasile devi Bisajakshi enna hrudayadolu nindu || 1 || Impu sompina chandra bimbe Kempu tuti nasikada rambe Jompu madanana purna Sakti gombe Sampigeya mudiditta vidya || 2 || Ravi koti teja prakase maha Kavijana hritkamala vase Avirala puri kaginele…