Haridasa Sahitya — Vyasadasa
Varagalanu koduvudu vasukiya priya
ವರಗಳನು ಕೊಡುವುದು ವಾಸುಕಿಯ ಪ್ರಿಯಾ
Composer: Vijaya Dasaru · Deity: Subramanya · Genre: Dasara Pada
Kannada lyrics
ವರಗಳನು ಕೊಡುವುದು ವಾಸುಕಿಯ ಪ್ರಿಯಾ । ಕರುಣದಿಂದಲಿ ಒಲಿದು ಕಂಡಮಾತುರದಲಿ ।। ಪ |। ಇಂದ್ರ ಸಮಾನ ದೇವತೆಯೆ ರತಿಪತಿಯೇ । ಇಂದಿರೇಶನ ನಿಜ ಕುಮಾರ । ಮಾರ । ಒಂದು ಕಾಲದಲಿ ಸುಂದರನೆನಿಸಿಕೊಂಡಿರ್ದ । ಬಂಧುವೇ ಅಹಂಕಾರ ಪ್ರಾಣಗಿಂದಧಿಕನೇ ।। 1 ।। ವನಜ ಸಂಭವನು ಸೃಷ್ಠಿ ಸೃಜಿಪಗೋಸುಗ । ಮನದಲ್ಲಿ ಪುಟ್ಟಿಸೆ ಚತುರ ಜನರ । ಮುನಿಗಳೊಳಗೆ ಸನತ್ಕುಮಾರನಾಗಿ । ಜನಿಸಿ ಯೋಗ ಮಾರ್ಗದಲ್ಲಿ ಚರಿಸಿದ ಕಾಮಾ ।। 2 ।। ತಾರಕಾಸುರನೆಂಬ ಬಹು ದುರಳ ತನದಲಿ । ಗಾರು ಮಾಡುತಿರಲು ಸುರಗಣವನು । ಗೌರಿ ಮಹೇಶ್ವರರಿಗೆ ಮಗನಾಗಿ ಪುಟ್ಟಿ । ಧಾರುಣಿಯೊಳಗೆ ಸ್ಕಂಧ ನೆನಿಸಿದೆ ।।3 ।। ರುಕ್ಮಿಣಿಯಲಿ ಜನಿಸಿ ಮತ್ಸ್ಯ ಉದರದಲಿ । ಪೊಕ್ಕು ಶಿಶುವಾಗಿ ಸತ…
Transliteration
Varagalanu koduvudu vasukiya priya | Karunadindali olidu kandamaturadali || pallavi || Indra samana devateye ratipatiye | Indiresana nija kumara | mara | Ondu kaladali sundaranenisikondirda | Bandhuve ahankara pranagindadhikane || 1 || Vanaja sambavanu srushthi srujipagosuga | Manadalli puttise catura janara | Munigalolage sanatkumaranagi | Janisi yoga margadalli carisida kama || 2 || Tarakasurane…