Haridasa Sahitya — Vyasadasa

Varada abhishteya karadu enage nee

ವರದ ಅಭೀಷ್ಟೆಯ ಕರದು ಎನಗೆ ನೀ

Composer: Gokaavi Antadreesha Dasaru · Deity: Shri Madanoor Vishnuteertharu · Genre: Dasara Pada

Kannada lyrics

ವರದ ಅಭೀಷ್ಟೆಯ ಕರದು ಎನಗೆ ನೀ ವರದನೆಂಬೊ ನಿನ್ನ ಬಿರುದನ ರಕ್ಷಿಸು ||a.pa|| ಅಜನ ಜನಕನÀಲ್ಲಿ ಇರುವಿಯೊ ವಿಜನ ದೇಶದಲ್ಲೀ ಸುಜನರು ಇದ್ದಲ್ಲಿ ಬರುವೆಯೊ ಭಜನೆಮಾಡುವಲ್ಲೀ ಸುಜನರ ತಾಪಕೆ ವ್ಯಜನನು ನೀನೂ ಸುಜನಕಲ್ಪತರು ಕುಜನಕುಠಾರಾ ||1|| ನಂದನಂದನನೂ ಅವನಿನ್ನ ಬಂಧನದೊಳಗಿಹನೂ ಅಂಧನಾಗಿ ನಾನೂ ಸಂಸೃತಿ ಬಂಧನದೊಳಗಿನ್ನೂ ನೊಂದೆನು ಬೆಂದೆನು ಬಂದೆನು ನಿನ್ನಲಿ ಕಂದನ ಲಾಲಿಸು ಒಂದಿನ ಬಿಡದೆ ||2|| ಮರೆತೆನು ನಾನಿನ್ನಾ ಅವಗುಣ ಮರೆತು ಪಾಲಿಸು ಮುನ್ನಾ ಪರತರಗುರು ನಿನ್ನಾ ಹೊರತು ಗತಿ ಗುರುತತಿಲ್ಲ ಮುನ್ನಾ ಅರಿತು ಅನಂತಾದ್ರಿ ನಿರತನ ತೋರಿಸು ತ್ವರತ ಮೋದ ಪುರನಿರತ ಸದ್ಗುರುವೆ ||3||

Transliteration

varada aBIShTeya karadu enage nI varadaneMbo ninna birudana rakShisu ||a.pa|| ajana janakanaÀlli iruviyo vijana dESadallI sujanaru iddalli baruveyo BajanemADuvallI sujanara tApake vyajananu nInU sujanakalpataru kujanakuThArA ||1|| nandanandananU avaninna bandhanadoLagihanU andhanAgi nAnU saMsRuti bandhanadoLaginnU nondenu beMdenu bandenu ninnali kandana lAlisu ondina biDade ||2|| maretenu nAninnA…