Haridasa Sahitya — Vyasadasa

Vani parama kalyani nam namo ajana

ವಾಣಿ ಪರಮಕಲ್ಯಾಣಿ ನಮೋ ನಮೋ ಅಜನರಾಣಿ ಪಂಕಜಪಾಣಿ

Composer: Vadirajaru · Deity: Saraswati Devi · Genre: Dasara Pada

Kannada lyrics

ವಾಣಿ ಪರಮಕಲ್ಯಾಣಿ ನಮೋ ನಮೋ ಅಜನರಾಣಿ ಪಂಕಜಪಾಣಿ ||pa|| ಭಳಿರೆ ಭಳಿರೆ ಅಂಬೆ ಭಕ್ತಜನಸುಖದಂಬೆಸುಳಿದಾಡು ಶುಭನಿತಂಬೆ ಅಮ್ಮ ನಿಮ್ಮ ಹೊಳೆ ಹೊಳೆವ ಮುಖ ಮುಕುರ ಬಿಂಬೆಇಳೆಯೊಳಗೆ ಸರಿಗಾಣೆ ಶಾರದಾಂಬೆ ಪುತ್ಥಳಿಬೊಂಬೆ||1|| ಶರಣು ಶರಣೆಲೆ ದೇವಿ ಸ್ಮರಣೆ ಮಾತ್ರದಿ ಕಾಯ್ವೆಚರಣದಂದುಗೆಯ ಠೀವಿ ನಳನಳಿಸುವಾ- ಭರಣಗಳನಿಟ್ಟು ಸುಖವೀವಿಧರೆಯೊಳಗೆ ಹರಿಣಾಕ್ಷಿ ನೀ ಸಲಹೆ ವಾಗ್ದೇವಿ ||2|| ಜಯಜಯತು ಜಗನ್ಮಾತೆ ಜಗದೊಳಗೆ ಪ್ರಖ್ಯಾತೆದಯಮಾಡು ಧವಳಗೀತೆ ಸತತ ಶ್ರೀ ಹಯವದನ ಪದಕೆ ಪ್ರೀತೆ ಇಳೆಯೊಳಗೆನಯದಿ ಗೆಲಿಸೆನ್ನ ಮಾತೆ ವಿಧಿಕಾಂತೆ ||3||

Transliteration

vani parama kalyani namo namo ajana rani pankaja paani balire balire ambe baktha jana sukathambe sulidhaadu subhanidhambe amma nimma hole holeva muka mukuta bimbe ileyolage sari kaane shaaradhambe putthali bombe||1|| sharanu sharanele devi smarana mathradhi kaiva sharanudhanthugeya teevi nale nalesuva baranagalaneetu sukha devi dhareyolage harinaakshi ne salahe vaakdevi||2|| jaya jayathu jagannath…