Haridasa Sahitya — Vyasadasa
Vandisuvadadiyali gananathana
ವಂದಿಸುವದಾದಿಯಲಿ ಗಣನಾಥನ
Composer: Purandara Dasaru · Deity: Ganesha · Genre: Bhakti
Kannada lyrics
ವಂದಿಸುವದಾದಿಯಲಿ ಗಣನಾಥನ ||ಪ|| ಸಂದೇಹ ಸಲ್ಲ ಶ್ರೀ ಹರಿಯಾಜ್ಞೆಯಿದಕುಂಟು ||ಅ.ಪ|| ಹಿಂದೆ ರಾವಣ ತಾನು ವಂದಿಸದೆ ಗಜಮುಖನ ನಿಂದು ತಪವನು ಕೈದು ವರ ಪಡೆಯಲು ಒಂದು ನಿಮಿಷದಿ ಬಂದು ವಿಘ್ನವನು ಆಚರಿಸಿ ತಂದ ವರಗಳನೆಲ್ಲ ಧರೆಗೆ ಇಳಿಸಿದನು ||೧|| ಅಂದಿನಾ ಬಗೆಯರಿತು ಬಂದು ಹರಿ ಧರ್ಮಜಗೆ ಮುಂದೆ ಗಣಪನ ಪೂಜಿಸೆಂದು ಪೇಳೆ ಒಂದೇ ಮನದಲಿ ಬಂದು ಪೂಜಿಸಲು ಗಣನಾಥ ಹೊಂದಿಸಿದ ನಿರ್ವಿಘ್ನದಿಂದ ರಾಜ್ಯವನು ||೨|| ಇಂದು ಜಗವೆಲ್ಲ ಉಮೆನಂದನನ ಪೂಜಿಸಲು ಚೆಂದದಿಂದಲಿ ಸಕಲ ಸಿದ್ಧಿಗಳನಿತ್ತು ತಂದೆ ಸಿರಿಪುರಂದರವಿಠಲನ ಸೇವೆಯೊಳು ಬಂದ ವಿಘ್ನವ ಕಳೆದಾನಂದವನು ಕೊಡುವ ||೩||
Transliteration
Vandisuvadadiyali gananathana Sandeha salla sri hariyajneyidakuntu|| Hinde ravana tanu vandisade gajamukhana Nindu tapavanugaidu vara padeyalu Ondu nimishadi bandu vighnavanu Acharisi Tanda varagalanella dharege ilisidanu||1|| Andina bageyaritu bandu hari dharmajage Munde ganapana poojisendu pele Onde manadali bandu pujisalu gananatha Hondisida nirvighnadinda rajyavanu||2|| Indu jagavella ume nand…