Haridasa Sahitya — Vyasadasa
Vandipe gajamukhane
ವಂದಿಪೆ ಗಜಮುಖನೆ
Composer: Haridasa · Deity: Ganesha · Genre: Dasara Pada
Kannada lyrics
ವಂದಿಪೆ ಗಜಮುಖನೆ ನಿನ್ನನು ಚಂದ್ರಶೇಖರ ಸುತನೆ ನಂದಬಾಲನ ಸ್ಮರಣೆ ಮನದೊಳು ತಂದು ನಿಲಿಸು ಇದನೆ ||pa|| ಮಂಗಳ ಮೂರುತಿಯೆ ಕೊಡುವೆನು ತೆಂಗು ಬಾಳೆಯ ಗೊನೆಯ ರಂಗನಮಲ ಕಥೆಯ ಮಾಡುವೆ ಸಂಗ ತೋರಿಸು ದೊರೆಯೆ ||1|| ಪಾಶಾಂಕುಶಧರನೆ ಸುಂದರ ಮೂಷಕವಾಹನನೆ ಪೋಷಿಸು ಭಕ್ತರನೆ ಹರಿಕಥೆ ಭಾಷೆಲಿ ನುಡಿಸುವನೆ ||2|| ಪಾರ್ವತಿ ಪಂಕಜನೆ ವಿಘ್ನಗಳ್ಹಾರಿಸಿ ಪಾಲಿಪನೆ| ಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ 3||3|| ಭಾರತ ಬರೆದವನೆ ವ್ಯಾಸರ ಭಾಷಿತದಿಳೆದವನೆ| ಮಾರಜನಕ ಭಜನೆ ಮಾಡುವೆ ತೋರಿಸು ಮಾರ್ಗವನೆ ||4|| ಇಂದಿರೇಶನ ಭಜಕ ನಿನ್ನನು ತಂದು ಮನದಿ ತೂಕ ಆನಂದದಿ ದಿನ ವಾರಾ ಮಾಳ್ಪುದು ಸುಂದರ ಸುರಲೋಕ ||5||
Transliteration
Vandipe gajamukhane | ninnanu | Chandrashekhara sutane | Nanda baalana smarane | Manadolu tandu nilisu idane || pa || Mangala moorutiye koduvenu | Tengu baaleya goneya | Ranganamala kateya | maaduve | Sanga torisu doreye || 1 || Paashaamkushadharane | Sundara mooshaka vaahanane | Poshisu bhaktarane | harikathe | Bhaashili nudisuvane || 2 || Paarvati pankajane | Vignagalhaarisi paalipane | Maarajan…