Haridasa Sahitya — Vyasadasa

Vandhisuve guru santatige

ವಂದಿಸುವೆ ಗುರು ಸಂತತಿಗೆ

Composer: Pranesha Dasaru · Deity: Guru Parampara · Genre: Dasara Pada

Kannada lyrics

ವಂದಿಸುವೆ ಗುರು ಸಂತತಿಗೆ ಪ್ರತಿದಿನಾ |ನಂದ ತೀರ್ಥರ ಮತೋದ್ಧಾರರಿವರಹುದೆಂದು ||pa|| ಶ್ರೀಮದಕ್ಷೋಭ್ಯ ಮುನಿ ತ್ರೈಲೋಕ್ಯ ಭೂಷಣರ |ಧೀಮಂತ ಲೋಕವಂದಿತ ತೀರ್ಥರ | ರಾಮಪದ ಜಲಜಾಳಿ ಸುಲಭ ರಘುಪುಂಗವರ |ಶ್ರೀಮಂತ ರಘುನಾಥ ರಘುವರ್ಯ ರಘುಸುತಗೆ ||1|| ವಿದ್ಯಾನಿಧಿ ಮುನಿ ರಘುಪತಿಯ ನಾರಾಯಣರ |ಮಧ್ವ ಭಕ್ತಾಗ್ರಣಿ ಮುಕುಂದ ತೀರ್ಥರ | ಅದ್ವೈತ ಗಿರಿ ಕುಲಿಶ ರಾಮ ರಘುಪತಿ ತೀರ್ಥ |ಸದ್ವೈಷ್ಣವರ ಪಾಲ ರಾಮಚಂದ್ರಾರ್ಯರಿಗೆ ||2|| ಶ್ರೀ ರಘೋತ್ತಮ ತೀರ್ಥ ರಘುರಾಜ ರಘುಪತಿಯ |ಶ್ರೀರಾಮಚಂದ್ರ ತೀರ್ಥಾರ್ಯರ ಪದ | ವಾರಿಜಯುಗಳವ ಭಕ್ತಿಪೂರ್ವಕದಿ ಸ್ಮರಿಸುವೆನು |ಮಾರಮಣ ಪ್ರಾಣೇಶ ವಿಠಲ ಕರುಣಿಸಲೆಂದು ||3||

Transliteration

Vandisuve guru santatige | pratidina | Nandatirthara matoddhararivarahudendu || pa || Sri madakshobyamuni trailokya bushanara | Dhimanta lokavandita tirthara | Rama pada jalajali sulaba ragupungavara | Srimanta raghunatha raghuvarya raghusutage || 1 || Vidyanidhi muni ragupatiya narayanara | Madhva baktagrani mukundatirthara | Advaita giri kulisa rama ragupati tirtha | Sadvaishnavara pala ramachan…