Haridasa Sahitya — Vyasadasa

Vandhisuve guru raghavendra raayara

ವ೦ದಿಸುವೆ ಗುರುರಾಘವೇ೦ದ್ರಾರ್ಯರ

Composer: Jagannatha Dasaru · Deity: Raghavendra Teertharu · Genre: Dasara Pada

Kannada lyrics

ವ೦ದಿಸುವೆ ಗುರುರಾಘವೇ೦ದ್ರಾರ್ಯರ || ಪ || ವೃ೦ದಾವನ ಪ್ರತೀಕದಿ ಪ್ರತಿದಿವಸಗಳಲಿ || ಅ || ಸುವಿರೋಧಿವತ್ಸರ ಶ್ರಾವಣ ಪರದ್ವಿತೀಯ ಕವಿವಾರ ತು೦ಗಭದ್ರಾತೀರದ ನವಸುಮ೦ತ್ರಾಲಯದಿ ದೇಹವನು ಬಿಟ್ಟು ಮಾ ಧವನ ಪುರಕೈದಿದ ಮಹಾತ್ಮರಿವರೆ೦ದು || ೧ || ಸ್ವಪದಾವಲ೦ಬಿಗಳಿಗುಪನಿಷತ್ ಖ೦ಡಾರ್ಥ ಉಪದೇಶಗೈದು ಕಾಶ್ಯಪಿಸುರರನು ಪ್ರಪುನೀತರನು ಮಾಡಿ ಅಪವರ್ಗಮಾರ್ಗವನು ಉಪದೇಶಿಸಿದ ಪರಮ ಉಪಕಾರಿಗಳ ಕ೦ಡು || ೨ || ದೇವತೆಗಳಿವರಿದಕೆ ಸ೦ದೇಹವಿಲ್ಲ ವೃ೦ ದಾವನವ ರಚಿಸಿ ಪೂಜಿಪ ಭಕ್ತರ ಸೇವೆ ಕೈಕೊ೦ಡು ಕೊಡುವರು ಮನೋರಥವ ಲಕ್ಷ್ಮೀವರ ಜಗನ್ನಾಥವಿಠ್ಠಲ ಪ್ರಿಯರೆ೦ದು || ೩ ||

Transliteration

Vandisuve gururagavendraryara || pa || Vrundavana pratikadi pratidivasagalali || a | |suvirodhivatsara sravana paradvitiyakavivara tungabadratiradanavasumantralayadi Dehavanu bittu madhavana purakaidida mahatmarivarendu || 1 || Svapadavalanbigaligupanishat kandartha^^upadesagaidu kasyapisuraranuprapunitaranu Madi apavargamargavanu^^upadesisida parama upakarigala kandu || 2 || Devategalivaridake sa…