Haridasa Sahitya — Vyasadasa
Vamana charithre/vamana huttu
ವಾಮನ ಚರಿತ್ರೆ/ ವಾಮನ ಹುಟ್ಟು (ಅದಿತಿದೇವಿಯು ಪಯೋವತವ ಮಾಡಿದಳಾಕೆ)
Composer: Sripadarajaru · Deity: Vishnu · Genre: Dasara Pada
Kannada lyrics
ಅದಿತಿದೇವಿಯು ಪಯೋವತವ ಮಾಡಿದಳಾಕೆ | ಪತಿಯ ಆಜ್ಞೆಯ ಕೇಳಿಕೊಂಡು || ಪೃಥಿವಿಯನೆಲ್ಲಾ ಕ್ರಮಿಸುವ ಸ್ವಾಮಿ ತಾ | ಸುತನಾಗಿ ಅಲ್ಲೆ ಜನಿಸಿದ || ೧ || ಜಾತ ಕರ್ಮವ ಮಾಡಿ ಮಧುವಿಟ್ಟು ಮುದದಿಂದ | ಪುಣ್ಯಾಹವಾಚನ ಮಾಡಿಕೊಂಡ || ಕೋಟಿ ಗೋದಾನ ಕೊಟ್ಟು ಕಶ್ಯಪ ತಾನು | ಶ್ರೀಕೃಷ್ಣಾಗ್ ಅರ್ಪಿತವೆಂದ || ೨ || ದಶರಾತ್ರಿ ಕಳೆಯಲು ಅಸುರ ಸಂಹಾರಗ | ಶಶಿಮುಖಿಯರೆಲ್ಲ ನೆರೆದು | ಎಸೆವೊ ಚಿನ್ನದ ತೊಟ್ಟಿಲೊಳಿಟ್ಟು ತೂಗುತ | ಹೆಸರು ಇಟ್ಟರು ವಾಮನನಂತ || ೩ || ಆನ್ನಪ್ರಾಶನ ಮಾಡಿ ಚೌಲಕರ್ಮವ- | ಮಾಡಿ ತನ್ನ ಬಂಧುಗಳನೆಲ್ಲ ಕರೆಸಿ | ಹನ್ನೆರಡು ವರುಷ ತಪವಿದ್ದು ಪಡೆದ | ಮೋಹನ್ನಗ ಮುಂಜಿ ಕಟ್ಟಿದರು || ೪ || ಉಪನಯನವನು ವಾಮನಗ ಕಶ್ಯಪ…
Transliteration
Aditaadeviyu payovrutava maadidalaake | patiya aagneya kelikondu || Pruthviyanellaa kramisuva swaami taa sutanaagi alle janisida || 1 || Jaata karmava maadi madhuvittu mudadinda |punyavaachana maadikonda || Koti godaana kottu kashyapa taanu |shree krushnagarpitavenda || 2 || Dasharaatri kaleyalu asura samhaaraga | shashimukhiyarella neredu | Yashavo chinnada tottilolittu tooguta | hesaru ittaru va…